ಅಕ್ಷರ ದಾಸೋಹ ಬಿಸಿಊಟ ನೌಕರರ ಪ್ರತಿಭಟನೆ

ಸಿಂಧನೂರು.ಜು.೨೯- ತಮ್ಮ ವಿವಿಧ ರೀತಿಯ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ ಪ್ರತಿಭಟನೆ ನಡೆಸಿ ತಾಲುಕಾ ಫಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವಿಗೆ ಮನವಿ ಪತ್ರ ಸಲ್ಲಿಸಿದರು.
ಅಸಮರ್ಪಕ ಪಡಿತರ ವಿತರಣೆ ಸಮಯಕ್ಕೆ ಸರಿಯಾಗಿ ಕಾಂಟಿಜೆನ್ಸಿ ಗೌರವ ಧನ ನೀಡುತ್ತಿಲ್ಲ ಕೆಲವು ಶಾಲೆಯ ಮುಖ್ಯ ಗುರುಗಳು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಇದರಿಂದ ಅಡುಗೆ ಕೆಲಸಕ್ಕೆ ತೊಂದರೆಯಾಗುತ್ತಿದೆ ಇನ್ನು ಮುಂದೆ ಈ ರೀತಿಯಾಗದಂತೆ ಕ್ರಮ ಕೈಗೊಳ್ಳುಬೇಕು ಎಂದು ಪ್ರತಿಭಟನಾಕಾರರು ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿದೇವಿಯವರನ್ನು ಒತ್ತಾಯಿಸಿದರು.
ಗ್ಯಾಸ್ ಸಿಲಿಂಡರ್ ಹಣ ಮಕ್ಕಳ ಸಂಖ್ಯೆ ಆಧರಿಸಿ ಅಥವಾ ಪೈಸ ಆಧಾರದಲ್ಲಿ ಪಡೆಯಬೇಕು ಎಂಬುದರ ಬಗ್ಗೆ ಸ್ಪಷ್ಟ ಪಡಿಸಬೇಕು ಮುಖ್ಯ ಗುರುಗಳು ಹಾಗೂ ಮುಖ್ಯ ಅಡುಗೆಯವರ ಜಂಟಿ ಖಾತೆ ಸಭೆ ಕರೆಯಬೇಕು. ೬೦ ವರ್ಷ ವಯೋಮಿತಿ ಆಧರಿಸಿ ನಿವೃತ್ತಿ ಗೊಳಿಸಿದವರಿಗೆ ೧ ಲಕ್ಷ ಇಡುಗಂಟು ನೀಡಬೇಕು ಹಾಗೂ ಅವರ ಕುಟುಂಬದ ಸದಸ್ಯರಿಗೆ ಅದೆ ಉದ್ಯೋಗದಲ್ಲಿ ನೇಮಿಸಿಕೊಳ್ಳಬೇಕು ಮತ್ತು ನಿವೃತ್ತಿ ಪಿಂಚಣಿ ಸೌಲಭ್ಯ ಕೊಡಬೇಕು ಹಾಗೂ ಇನ್ನಿತರ ಬೇಡಿಕೆಗಳ ಮನವಿ ಪತ್ರವನ್ನು ತಾ.ಪ. ಇಒಗೆ ನೀಡಿದರು.
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಊಟ ನೌಕರರ ಸಂಘದ ಗೌರವಾಧ್ಯಕ್ಷರಾದ ಶೇಕ್ಷಾಖಾದ್ರಿ ಮುಖಂಡರಾದ ರೇಣುಕಮ್ಮ ವಿಶಾಲಾಕ್ಷಮ್ಮ, ಶರಣಮ್ಮ ಪಾಟೀಲ ಸೇರಿದಂತೆ ಅಕ್ಷರ ದಾಸೋಹ ಬಿಸಿಊಟ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.