ಅಕ್ಷರ ಜೋಳಿಗೆಯ ಭೂಮಿ ಸರ್ಕಾರಕ್ಕೆ ಹಸ್ತಾಂತರಶಾಲೆಗೆ ಭಾಗ್ಯವಂತಿ ಅಕ್ಷರ ಜೋಳಿಗೆ ಪ್ರೌಢಶಾಲೆ ನಾಮಕರಣ

ಅಫಜಲಪುರ:ನ.21:ತಾಲೂಕಿನ ಘತ್ತರಗಾ ಪ್ರೌಢಶಾಲೆ ಕಟ್ಟಡ ಸಂಪೂರ್ಣವಾಗಿ ಹಾಳಾಗಿದ್ದು,ಇದನ್ನು ಹೊಸದಾಗಿ ನಿರ್ಮಾಣ ಮಾಡಬೇಕಾದರೆ ಸ್ಥಳೀಯ ಮುಜರಾಯಿ ಇಲಾಖೆಯವರು ಅನುಮತಿ ನೀಡುತ್ತಿಲ್ಲ.ಹೀಗಾಗಿ ಗ್ರಾಮಸ್ಥರ ಸಹಕಾರದೊಂದಿಗೆ ಖರೀದಿಸಿದ ಅಕ್ಷರ ಜೋಳಿಗೆ ಭೂಮಿ ರಾಜ್ಯಪಾಲರ ಆದೇಶದ ಅನುಸಾರ ಮುಖ್ಯಗುರುಗಳು ಪ್ರೌಢಶಾಲೆ ಘತ್ತರಗಾ ಇವರ ಹೆಸರಿನಲ್ಲಿ ನೋಂದಾಯಿಸಿರುವ ಪತ್ರವನ್ನು ಇಂದು ಹಸ್ತಾಂತರ ಮಾಡಲಾಗುವುದೆಂದು ಡಾ.ಶಿವಾನಂದ ಮಹಾಸ್ವಾಮಿಗಳು ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ರವಿವಾರದಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರೌಢಶಾಲೆಯನ್ನು ಹೊಸದಾಗಿ ನಿರ್ಮಾಣ ಮಾಡಲು ಸುಮಾರು 2 ಕೋಟಿ ರೂ.ಅನುದಾನ ಸರ್ಕಾರದಿಂದ ಬಂದಿದ್ದರು ಸಹ ಈಗಿರುವ ಸ್ಥಳದಲ್ಲಿ ಹೊಸದಾಗಿ ನಿರ್ಮಾಣ ಮಾಡಲು ಮುಜರಾಯಿ ಇಲಾಖೆ ವ್ಯಾಪ್ತಿಯ ಈ ಜಮೀನು ಇರುವುದರಿಂದ ಅವಕಾಶ ನೀಡುತ್ತಿಲ್ಲ.ಇದರಿಂದಾಗಿ ಮಕ್ಕಳು ದಿನನಿತ್ಯ ಪರದಾಡುತ್ತಿದ್ದಾರೆ ಹೀಗಾಗಿ ಗ್ರಾಮಸ್ಥರು ಹಾಗೂ ನಾವೆಲ್ಲರೂ ಸೇರಿ ಒಂದು ಸಭೆ ನಡೆಸಿ ಅಕ್ಷರ ಜೋಳಿಗೆ ಹೆಸರಿನ ಮೇಲೆ ದೇಣಿಗೆ ಸಂಗ್ರಹಿಸಿ ಶಾಲಾ ಕಟ್ಟಡಕ್ಕೆ ಜಮೀನು ನೀಡಲು ತೀರ್ಮಾನ ತೆಗೆದುಕೊಂಡು 5 ದಿನ ಕಾಲ ಮನೆ ಮನೆಗೆ ತಿರುಗಾಡಿ ಸುಮಾರು 61 ಲಕ್ಷ ರೂ.ದೇಣಿಗೆ ಸಂಗ್ರಹಿಸಿ ಅದರಲ್ಲಿ 40 ಲಕ್ಷ ರೂ.ಕೊಟ್ಟು ಎರಡುವರೇ ಎಕರೆ ಜಮೀನನ್ನು ಈಗಾಗಲೇ ಖರೀದಿ ಮಾಡಲಾಗಿದೆ.ಈ ಜಮೀನನ್ನು ಸರ್ಕಾರಿ ಪ್ರೌಢಶಾಲೆ ಮುಖ್ಯ ಗುರುಗಳು ಇವರ ಹೆಸರಿಗೆ ನೋಂದಣಿ ಮಾಡಲಾಗಿದೆ.ಇದನ್ನು ಇಂದು ಹಲವು ಮಠಾಧೀಶರು,ಜನಪ್ರತಿನಿಧಿಗಳು,ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಮುಖ್ಯಗುರುಳಿಗೆ ಹಸ್ತಾಂತರ ಮಾಡಲಾಗುವುದು.ಒಟ್ಟು 5 ಎಕರೆ ಜಮೀನು ಖರೀದಿ ಮಾಡಬೇಕೆಂಬ ಸಂಕಲ್ಪವನ್ನು ತೊಟ್ಟಿದ್ದೇವೆ.ಹೀಗಾಗಿ ಸ್ಥಳೀಯ ಶಾಸಕ ಎಂ.ವೈ.ಪಾಟೀಲ್ ಹಾಗೂ ಜಿಪಂ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ್ ಅವರು ತಲಾ ಒಂದೊಂದು ಎಕರೆ ಜಮೀನು ಖರೀದಿಸಿ ನೀಡುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ.ಈ ಜಮೀನಿನಲ್ಲಿ ವಸತಿ ನಿಲಯ, ಆಸ್ಪತ್ರೆ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳನ್ನು ನಿರ್ಮಾಣಕ್ಕೆ ನೀಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಲ್ಲಯ್ಯ ಕರಭಂಟನಾಳ,ಕೆ.ಜಿ.ಪೂಜಾರಿ, ಸುಭಾಷ್ ಹಂಚನಾಳ,ಸಿದ್ದಣ್ಣಗೌಡ ಗುಡೇದ,ಬಾಬುಗೌಡ ಪಾಟೀಲ್, ಅಪ್ಪಾಸಾಬ ಅಮ್ಮಣ್ಣಿ, ಭಗವಂತ ವಗ್ಗೆ,ಶ್ರೀಶೈಲ್ ಕುರಿ,ಭಾಗಣ್ಣಾ ಕಟ್ಟಿಮನಿ, ಅಕ್ಬರ್ ಅತ್ತಾರ,ಮಾಂತು ಸಾಲಕ್ಕಿ, ಕೃಷ್ಣ ಬಡಿಗೇರ, ಗುಂಡಪ್ಪ ಹೂಗಾರ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

ಶಾಲಾ ನಿವೇಶನಕ್ಕಾಗಿ ನಡೆದಿರುವ ಸುಮಾರು 23 ದಿನಗಳ ಕಾಲ ಶ್ರೀ ಕಡಕೋಳ ಮಡಿವಾಳೇಶ್ವರ ಪುರಾಣ ಪ್ರವಚನ ಸಮಾರೋಪ ಸಮಾರಂಭ ಮಂಗಳವಾರ ನಡೆಯಲಿದೆ.ಈ ಶಾಲೆಗೆ ಶ್ರೀ ಭಾಗ್ಯವಂತಿ ಅಕ್ಷರ ಜೋಳಿಗೆ ಪ್ರೌಢಶಾಲೆ ಎಂದು ನಾಮಕರಣ ಮಾಡಲಾಗುವುದು.
-ಡಾ.ಶಿವಾನಂದ ಮಹಾಸ್ವಾಮಿಗಳು ದಾಸೋಹ ವಿರಕ್ತಮಠ ಸೊನ್ನ