“ಅಕ್ಷರ ಕಲಿಸಿದಾತನೇ ಜಗತ್ತಿನ ಶ್ರೇಷ್ಠ ಗುರು” : ಶಾಸಕ ಡಾ.ಜಾಧವ

ಕಾಳಗಿ:31:ಏನೂ ಅರಿಯದ ಮಗುವನ್ನು ಒಬ್ಬ ಶಿಲ್ಪಿಕಾರನಂತೆ ತಿದ್ದಿ-ತೀಡಿ ಬುದ್ಧಿ ಹೆಳಿ, ಶಿಸ್ತಿನಿಂದ ಸಂಸ್ಕಾರಯುತವಾದ ಬದುಕಿನತ್ತ ದಾರಿತೋರುತ್ತ ಅಕ್ಷರ ಜ್ಞಾನವನ್ನು ಮೂಡಿಸುವವನೇ ಜಗತ್ತಿನ ನಿಜವಾದ ಶಿಕ್ಷಕ ಎಂದು ಶಾಸಕ ಡಾ.ಅವಿನಾಶ ಜಾಧವ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ತಾಲೂಕಿನ ಬುಗಡಿ ತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಚಂದು ಚೌವ್ಹಾಣ ಅವರ ಸೇವಾ ನಿವೃತ್ತಿಯ ಪ್ರಯುಕ್ತ ಶನಿವಾರ ತಾಂಡ ಜನತೆ ಹಾಗೂ ಅಭಿಮಾನಿ ಬಳಗದವರು ಏರ್ಪಡಿಸಿರುವ ಬೀಳ್ಕೊಡುಗೆ ಸಮಾರಂಭದ ಉದ್ಘಾಟಕರಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.

ತಮ್ಮ ಸೇವಾ ಅವಧಿಯಲ್ಲಿ ಸರ್ಕಾರ ನೀಡಿರುವ ಗುರುತರ ಕಾರ್ಯವನ್ನು ತುಂಬಾ ಅಚ್ಚು-ಕಟ್ಟಾಗಿ ನಿಭಾಯಿಸಿ, ಮಕ್ಕಳ, ಪಾಲಕರ ಹಾಗೂ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿ ಸೇವಾ ನಿವೃತ್ತಿಗೊಳ್ಳುತ್ತಿರುವದು ಉಳಿದ ಸರ್ಕಾರಿ ನೌಕರರಿಗೆ ಮಾದರಿಯಾಗಿದೆ. “ಸರ್ಕಾರದ ಕೆಲಸ ದೇವರ ಕೆಲಸ” ಎಂದು ಭಕ್ತಿಯಿಂದ ತಮ್ಮ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ಕಪಾಡಿಕೊಂಡು ಬಂದಿರುವುದಕ್ಕೆ ಇಂದು ತಮಗೆ ಸನ್ಮಾನಗಳ ಸುರಿಮಳೆಯೇ ಸಾಕ್ಷಿಯಾಗಿದೆ ಎಂದ ಶಾಸಕರು, ಗುರು ಶಕ್ತಿಯಿಂದ ಕುಡಿರುವ ತಮ್ಮ ಪ್ರಖರವಾದ ಕೊಡುಗೆ ನಿವೃತ್ತಿ ನಂತರವು ಸಮಾಜಕ್ಕೆ ನಿರಂತರವಾಗಿರಲಿ ಎಂದರು.

ಸೇವಾ ನಿವೃತ್ತಿಹೊಂದಿರುವ ಚಂದು ಚೌವ್ಹಣ ಮಾತನಾಡಿ ತಮ್ಮ ಅಪಾರವಾದ ಗೌರವವನ್ನು ಪಡೆಯಬೇಕಾದರೆ ನಾನು ನನ್ನ ಸೇವೆಯಲ್ಲಿಟ್ಟಿರುವ ಭಕ್ತಿಯೇ ಕಾರಣ ಹಬ್ಬದ ವಾತವರಣವನ್ನು ನಿರ್ಮಾಣ ಮಾಡಿ ಶಾಲೆಯಿಂದ ಬಿಳ್ಕೋಡುವ ಸನ್ನಿವೇಶವನ್ನು ಕಂಡ ನಿವೃತ್ತ ಮುಖ್ಯಗುರು ಚೌವ್ಹಾಣ ಅವರು, ಅದ್ಗಕಂಠದಿಂದ ಮಕ್ಕಳನ್ನು ನೆನೆದು ತಮ್ಮ ಸೇವಾ ಸಮಯಗಳ ಘಟನೆಗಳನ್ನು ಸ್ಮರಿಸಿಕೊಂಡರು.

ಗೊಬ್ಬೂರವಾಡಿಯ ಬಳಿರಾಮ ಮಹಾರಾಜ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಲಬುರಗಿ ಜಿಲ್ಲಾ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ, ತಾಪಂ.ಮಾಜಿ ಸದಸ್ಯ ರಾಮು ರಾಠೋಡ, ಸಂತೋಷ ಕಲಮೂಡ ಮಾತನಾಡಿದರು.

ಸೋನ್ಯಾಲಗಿರಿ ಬೆಡಸೂರ ಪರ್ವತಲಿಂಗ ಪರಮೇಶ್ವರ ಮಹಾರಾಜರು ದಿವ್ಯ ಸಾನಿಧ್ಯ ವಹಿಸಿದ್ದರು. ಮುಗಳನಾಗಾವಿಯ ಜೇಮ್‍ಸಿಂಗ್ ಮಹಾರಾಜರು, ಬೆಡಸೂರ ಗ್ರಾಪಂ.ಅಧ್ಯಕ್ಷ ಸಂಜುಕುಮಾರ ತೆಳಮನಿ, ಮಹಾಂತೇಶ ಪಂಚಾಳ, ನಿಖಿತಾ ರಾಠೋಡ, ನಾಗವೇಣಿ, ಹನುಮಂತ ರಾಠೋಡ, ಶಿವರಾಜ ಪಾಟೀಲ ಅರಣಕಲ್, ಲಕ್ಷ್ಮಣ ಚೌವ್ಹಾಣ, ಹೋಬು ಚೌವ್ಹಾಣ, ಪವನ್, ಸಂಜುಕುಮಾರ, ಸುಧಾಕರ್, ಸುಂದರ ಸಾಗರ, ರವಿ ಸಿಂಗೆ ಶಿಕ್ಷಕರಾದ ನಾಗಯ್ಯ, ವಿಜಯಕುಮಾರ, ಏಮನಾಥ, ಅಣವೀರಪ್ಪ, ರಾಜು, ದೀಪಾರಾಣಿ, ಸುಮನ್ ಸೇರಿದಂತೆ ಅನೇಕರಿದ್ದರು.