ಅಕ್ಷರದೊಂದಿಗೆ ಸಂಸ್ಕಾರವೂ ಮುಖ್ಯ: ಅನಿತಾ ಹಿರೇಮನಿ

ಕಲಬುರಗಿ:ನ.17:ಅಕ್ಷರದೊಂದಿಗೆ ಸಂಸ್ಕಾರವೂ ಸಹ ಬಹುಮುಖ್ಯವಾಗಿದೆ ಎಂದು ಶಿವಮೊಗ್ಗ ಕೇಂದ್ರ ಕಾರಾಗೃಹದ ಸಹಾಯಕ ನಿರೀಕ್ಷಕಿ ಶ್ರೀಮತಿ ಅನಿತಾ ಹಿರೇಮನಿ ಅವರು ಹೇಳಿದರು.
ನಗರದ ಹೊರವಲಯದಲ್ಲಿನ ತಾಜ್‍ಸುಲ್ತಾನಪುರದಲ್ಲಿ ಮಂಗಳವಾರ ಚಿನ್ನದ ಕಂತಿ ಚಿಕ್ಕವೀರೇಶ್ವರ್ ಸಂಸ್ಥಾನ ಹಿರೇಮಠದಲ್ಲಿ ಕಾರ್ತಿಕ ಮಾಸದ ನಿಮಿತ್ಯ ದೀಪೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಜನ್ಮ ಕೊಟ್ಟ ತಂದೆ, ತಾಯಿಯ ಋಣ ಹಾಗೂ ಹುಟ್ಟಿದ ಊರಿನ ಋಣ ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದರು.
ಇಂದಿನ ವಿದ್ಯಾರ್ಥಿಗಳು ಉತ್ತಮ ವ್ಯಾಸಂಗದೊಂದಿಗೆ ಸಂಸ್ಕಾರದ ಸಮಾಜ ನಿರ್ಮಿಸುವ ಕಾರ್ಯ ಮಾಡಬೇಕು ಎಂದು ಅವರು ಕರೆ ನೀಡಿದರು. ಸಾನಿಧ್ಯ ವಹಿಸಿದ್ದ ಶ್ರೀಮಠದ ಡಾ. ರೇವಣಸಿದ್ಧ ಶಿವಾಚಾರ್ಯರು ಆಶೀರ್ವಚನ ನೀಡಿ, ನೀರಿನ ಸ್ನಾನ ಮಾಡಿದ ವ್ಯಕ್ತಿ ಬಟ್ಟೆಗಳನ್ನು ಬದಲಾಯಿಸುತ್ತಾನೆ. ಆದಾಗ್ಯೂ, ಬೆವರಿನಿಂದ ಸ್ನಾನ ಮಾಡಿದ ವ್ಯಕ್ತಿ ಇತಿಹಾಸವನ್ನೇ ಸೃಷ್ಟಿ ಮಾಡುತ್ತಾನೆ. ಬರುವ ದಿನಗಳಲ್ಲಿ ಸರ್ವರ ಬಾಳಿನಲ್ಲಿ ಒಳ್ಳೆಯ ದಿನ ಬರುವುದರೊಂದಿಗೆ ನಂದದ ಆನಂದದ ಜ್ಯೋತಿಯಾಗಿ ಸೇವೆಗೈಯಲಿ ಎಂದು ಹಾರೈಸಿದರು.
ಮಠಕ್ಕೆ ಲಕ್ಷ, ಲಕ್ಷ ಕೊಡೋದು ಬೇಡ. ಮಠದ ಕಡೆಗೆ ಲಕ್ಷ್ಯವಿದ್ದರೆ ಸಾಕು. ಮಠ ತಾನಾಗಿಯೇ ಬೆಳೆಯುತ್ತದೆ ಎಂದು ಅವರು ಹೇಳಿದರು. ಮುಖ್ಯ ಅತಿಥಿಗಳಾಗಿ ದೊಡ್ಡಪ್ಪ ಅಪ್ಪಾ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಬಾಬುರಾವ್ ಶೇರಿಕಾರ್, ಯುವ ಮುಖಂಡ ಕಾಳಿದಾಸ್ ಪೂಜಾರಿ, ಶಿಕ್ಷಣ ಪ್ರೇಮಿಗಳಾದ ಕಲ್ಯಾಣರಾವ್ ಶೀಲವಂತ್, ಉದ್ಯಮಿಗಳಾದ ಜಗದೀಶ್ ಮರಪಳ್ಳಿ, ನಾಲ್ಕು ಚಕ್ರದ ಮುಖ್ಯಸ್ಥರಾದ ಮಾಲಾ ಕಣ್ಣಿ, ಮಾಲಾ ಡೊಣ್ಣೂರ್, ಶಿಕ್ಷಕರ ಪ್ರಭುಲಿಂಗ್ ಮೂಲಗೆ ಮುಂತಾದವರು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಶಿವಲಿಂಗಪ್ಪ ಮಾಳಾ, ಶಿವಶರಣಪ್ಪ ಹಿರೇಮನಿ, ವೀರಯ್ಯ ಬಾಳಿ, ನಾಗೇಂದ್ರ ದೇಗಲಮಡಿ, ಅನ್ನಪೂರ್ಣ ಸಂಗೋಳಗಿ, ರೇವಣಸಿದ್ದಯ್ಯ ಬೇಲೂರ್, ಮಲ್ಲಿಕಾರ್ಜುನ್ ಮುದ್ದಾಳ್, ಬಸವರಾಜ್ ಶೀಲವಂತ್ ಮುಂತಾದವರು ಉಪಸ್ಥಿತರಿದ್ದರು. ಸಾಹಿತಿ ನಾಗೇಂದ್ರ ಮಾಡ್ಯಾಳೆ ಅವರು ಪ್ರಾರ್ಥನಾಗೀತೆ ಹಾಡಿದರು. ನ್ಯಾಯವಾದಿ ಹಣಮಂತರಾಯ್ ಅಟ್ಟೂರ್ ಅವರು ಆರಂಭದಲ್ಲಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು. ರವಿಕುಮಾರ್ ಶಹಾಪುರಕರ್ ಅವರು ಕಾರ್ಯಕ್ರಮ ನಿರೂಪಿಸಿದರು.