ಅಕ್ಷರಕ್ಕಿಂತ ಅರ್ಥವೇ ಪ್ರಧಾನ: ಶಿವಾಜಿ ಜೋಯಿಸ

ಕಲಬುರಗಿ,ಆ.13: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಎರಡು ದಿನಗಳ ಕಾರ್ಯಗಾರ ಉದ್ಘಾಟನೆ ಮಾಡಿ ಮಾತನಾಡುತ್ತ ಪೆÇ್ರ. ಶಿವಾಜಿ ಜೋಯಿಸ್ ಅವರು ಬೌದ್ಧ ಅಧ್ಯಯನಕ್ಕೆ ಸಾಂಸ್ಕøತಿಕತೆ ಹಿನ್ನೆಲೆಯನ್ನು ಒಳಪಡಿಸುವ ನಿಟ್ಟಿನಲ್ಲಿ ರಚನೆಗೊಂಡ ಬೌದ್ಧ ಅಧ್ಯಯನ ಆಶಯ ಆ ನೆಲೆಯಲ್ಲಿ ಕನ್ನಡ ಇಂಗ್ಲಿಷನ ರಚನೆಗೊಂಡ 1000 ಕೃತಿಗಳನು ಸಂಗ್ರಹಿಸಿ, ಪ್ರದರ್ಶಿ ‘ಬುದ್ಧಯಾನ’ ಎಂಬ ಕಾರ್ಯಗಾರವನ್ನು ಏರ್ಪಡಿಸಿ ಯಶಸ್ವಿಗೊಳಿಸಿದ್ದು ಗಮನಾರ್ಹ. ಕನ್ನಡದಲ್ಲಿ ಬೌದ್ಧ ಸಾಹಿತ್ಯ ಕೃತಿಗಳು ಬಂದಿವೆ. ಅವುಗಳ ಸಮಗ್ರ ಅಧ್ಯಯನ, ಅನುಸಂಧಾನಗೊಳಿಸಬೇಕಾದ ಅವಶ್ಯಕತೆಯಿದೆ. ಜಿ.ಪಿ. ರಾಜರತ್ನ ಆದಿಯಾಗಿ ಕನ್ನಡದಲ್ಲಿ ಬೌದ್ಧ ಸಾಹಿತ್ಯದಲ್ಲಿ ಬುದ್ಧನ ಕುರಿತಾದ ಮೌಲಿಕ ಚಿಂತನೆಗಳನ್ನು ಬಿತ್ತುವಂತಹ ಕೆಲಸ ನಡೆಸುತ್ತಿರುವುದು ಸಂತೋಷ. ಹಿತಬೋಧನೆ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನಗಳನ್ನು ಶೋಧಿಸಿದ ಎಸ್.ಜಿ. ನರಸಿಂಹಚಾರ್ಯರ ಆರು ಸಂಪುಟಗಳನ್ನು ಅಧ್ಯಯನ ನಡೆಯಬೇಕಿದೆ. ಬುದ್ಧನ ಜೀವನದ ಬಗೆಗೆ ಜಗತ್ತಿಗೆಲ್ಲ ಗೊತ್ತು. ಆದರೆ 2600 ವರ್ಷಗಳ ಹಿಂದಿನ ಚಾರಿತ್ರಿಕ ಅಂಶಗಳು, ಬೋಧನೆಗಳು ಪಾಶ್ಚಾತ್ಯರಿಂದ ರಚನೆಗೊಂಡವು. ವಿಶೇಷವೆಂದರೆ ಪಾಲಿ, ಪಾಕೃತ ಮತ್ತು ಸಂಸ್ಕøತ ಭಾಷೆಯಲ್ಲಿ ರಚನೆಗೊಂಡವುಗಳಾಗಿವೆ. ಬುದ್ಧನ ಕುರಿತು ತಿಪಿಟಕಗಳಲ್ಲಿ ಬುದ್ಧನ ಜೀವನ ಕುರಿತಾದ ಅಂಶಗಳು ಸಿಗುವುದಿಲ್ಲ. ಮಹಾಪದಾನ ಸುತ್ತದಲ್ಲಿ ಬುದ್ಧನ ಕುರಿತಾದ ಜೀವನ ಚರಿತ್ರೆ. ಬೋಧನೆಗಳನ್ನು ವಿವರಣೆಗೊಂಡಿವೆ. ಬುದ್ಧನ ಕೊನೆಯ ದಿನಗಳ ಕುರಿತಾದ ಅಂಶಗಳನ್ನು ಪರಿನಿಬ್ಬಾಣ ಸುತ್ತದಲ್ಲಿ ಉಲ್ಲೇಖಗೊಂಡಿವೆ.
ಬುದ್ಧ ಜಗತ್ತಿಗೆ ಪರಿಚಯಗೊಂಡದ್ದು ಸಂಸ್ಕøತ ಕೃತಿಗಳಿಂದ ಎಂಬುದು ಗಮನಿಸಬೇಕು. ಲಲಿತ ವಿಸ್ತರ ಎಂಬ ಕೃತಿಯನ್ನು ಆರ್. ಶೇಷಾಶಾಸ್ತ್ರೀಯವರು ತೆಲಗು ಮೂಲದಿಂದ ಕನ್ನಡಕ್ಕರಿಸಿದ್ದಾರೆ. ಆಶ್ವಘೋಶನ ಬುದ್ಧ ಚರಿತ್ರೆಗೆ ಆಕರವಾದ ಗ್ರಂಥ. ಬುದ್ಧನ ಜನನ ಇತಿವೃತ್ತ ಕುರಿತು ಎಂ. ಗೋವಿಂದ ಪೈ ಅವರು ಬಹುಭಾಷಾ ಬಲ್ಲವರಾಗಿರುವುರಿಂದಾಗಿ ಅರ್ಥಪೂರ್ಣವಾಗಿ ನಿರೂಪಿಸಿದ್ದಾರೆ. ಕ್ರಿ.ಪೂ. 581 ಜನನ ಎಂದು ಶೋಧಿಸಿದ್ದಾರೆ ಶಾಕ್ಯರ ಮತ್ತು ಕೋಲಿಯ ರಾಜ್ಯಗಳ ನಡುವಿನ ರೋಹಿಣಿ ನದಿಯ ನೀರು ಹಂಚಿಕೆಗಾಗಿ ನಡೆದ ಸಂಘರ್ಷ ನಿಲ್ಲಿಸಲು ಬುದ್ಧ ಸನ್ಯಾಸಿಯಾಗಿ ಮನೆಯನ್ನು ತೊರೆದ ಎಂದು ಧರ್ಮಾನಂದ ಕೊಸಂಬಿಯವರು ನಂತರ ಬಾಬಾಸಾಹೇಬ್ ಅಂಬೇಡ್ಕರ್ ಅವರು ತಿಳಿಸಿದ ಮೊದಲಿಗರು. ಸತ್ಯ ಒಂದೇ ಎರಡಿಲ್ಲ, ಆದರೆ ಅಕ್ಷರಕ್ಕಿಂತ ಇಲ್ಲಿ ಅರ್ಥವೇ ಪ್ರಧಾನವಾದದ್ದು ಇವುಗಳನ್ನು ಮೈಗೂಡಿಸಿಕೊಳ್ಳವದು, ಅವಶ್ಯಕವಾಗಿದೆ.
ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪೆÇ್ರ. ಎಚ್.ಟಿ. ಪೆÇೀತೆ ಅವರು ಮಾತನಾಡುತ್ತಾ, ಭಾರತದಲ್ಲಿ ಜಡತ್ವವೇ ಹೆಚ್ಚಿದೆ. ಬುದ್ಧ ನಡೆದ ಈ ಮಣ್ಣಲ್ಲಿ ಹಿಂಸೆ ನಡೆಯುತ್ತಿರುವುದು ವಿಷಾದನೀಯ. ಮನುಷ್ಯ ಮನುಷ್ಯನೊಳಗೆ ಹೇಗಿರಬೇಕು ಎಂಬುದು ಗೌಮ ಬುದ್ಧನಲ್ಲಿ ಕಾಣಬಹುದು. ಬುದ್ಧ ಪ್ರಜ್ಞೆ, ಜಾಗೃತಗೊಳಿಸಬಹÅದು. ಮೈತ್ರಿ, ಜ್ಞಾನದ ವಿಕಾಸ ಸೂಕ್ತ ಎಂಬುದನ್ನು ತಿಳಿಸಿದರು. ಬುದ್ಧನ ಮಧ್ಯಮ ಮಾರ್ಗ ಇವತ್ತಿನ ಅವಶ್ಯಕ. ನಾನು ಹೇಳಿದ್ದೆ ಒಪ್ಪಿಕೊಳ್ಳಿ ಎಂದು ಬುದ್ಧ ಹೇಳಲಿಲ್ಲ. ಪರೀಕ್ಷಿಸಿ ಸರಿಯೆನಿಸಿದಾಗ ಒಪ್ಪಿಕೊಂಡು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಇಂದು ನಾವೇಲ್ಲ ಕ್ರೌರ್ಯ, ಆಕ್ರೋಶ ತೊರೆದು ಬುದ್ಧನ ಶಾಂತಿಯ ತತ್ವಸಿದ್ಧಾಂತ ಪ್ರತಿಪಾದಿಸಬೇಕಾಗಿದೆ. ನಮ್ಮಲ್ಲಿರುವ ಕ್ರೌರ್ಯ ಭೂಮಿಯನ್ನು ಬರಡುಗೊಳಸುತ್ತದೆ. ಅದನ್ನು ಬಿಟ್ಟು ಮೈತ್ರಿ ಕರುಣೆಯಿಂದ ಫಲವತ್ತತೆ ಹೆಚ್ಚಿಸುವ ಗುಣವನ್ನು ಚಲಶೀಲಗೊಳಿಸಬೇಕಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಪೆÇ್ರ. ರಮೇಶ ರಾಠೋಡ್ ಅವರು ಮಾತನಾಡುತ್ತಾ ಪಾಲಿ ಭಾಷೆ ಹಳೆಯದಾದ ಭಾಷೆ. ಸಂಸ್ಕøತ ಭಾಷೆಯಲ್ಲಿ ಪಾಲಿ ಭಾಷೆಯ ಹಲವಾರು ಪದಗಳು ಪ್ರಯೋಗೊಂಡಿರುವುದು ಕಾಣಬಹÅದು.
ಪೆÇ್ರ. ಮಲ್ಲೇಪುರಂ ಜಿ. ವೆಂಕಟೇಶ ಅಧ್ಯಕ್ಷೀಯ ಮಾತನಾಡುತ್ತ ಇಂತಹ ಕಾರ್ಯಗಾರ ಏರ್ಪಡಿಸುವುದರ ಮೂಲಕ ಯುವ ಪೀಳಿಗೆ ಬುದ್ಧನ ಕುರಿತಾದ ಜೀವನ ಚರಿತ್ರೆ ಅಧ್ಯಯನ, ಅನುಸಂಧಾನದಿಂದ ಸಂಶೋಧನ್ಮಾತಕ ಅಂಶಗಳು ಮುಖ್ಯವಾಹಿನಿಗೆ ಬರಲು ಸಾಧ್ಯ. ಇದರಿಂದ ಬುದ್ಧ ಪ್ರಜ್ಞೆ ಪಸರಿಸಲು, ಬುದ್ಧನ ಬೋಧನೆಗಳು, ಚಿಂತನೆಗಳು ಕುರಿತಾದ ಚರ್ಚಿಗಳು ನಡೆದು ಒಮ್ಮತದ ಅಭಿಪ್ರಾಯಕ್ಕೆ ಬರಲು ಅನುಕೂಲವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಬುದ್ಧವಿಹಾರ ಟ್ರಸ್ಟಿನ ಆಡಳಿತಾಧಿಕರಾಗಳಾದ ಶ್ರೀ ರಮೇಶ ಬೇಗಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿ ಉಪನ್ಯಾಸಕರು, ಸಂಶೋಧನಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಬೋಧಕ-ಬೋಧಕೇತ್ತರ ಸಿಬ್ಬಂದಿ ಮತ್ತು ನಗರದಿಂದ ಬಂದ ಬೌದ್ಧ ಅನುಯಾಯಿಗಳು ಉಪಸ್ಥಿತರಿದ್ದರು.
ಡಾ. ಎಂ.ಬಿ. ಕಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು, ಡಾ. ಹಣಮಂತ ಮೇಲಕೇರಿ ವಂದಿಸಿದರು, ಡಾ. ಸಂತೋಷಕುಮಾರ ಕಂಬಾರ ನಿರೂಪಿಸಿದರು.