ಅಕ್ಷಯ್, ಸುನೀಲ್, ಪರೇಶ್ ರಾವಲ್ ಅಭಿನಯದ ’ಹೇರಾಫೇರಿ’ ಫಿಲ್ಮ್ ನ ಭಾಗ ೩ ರ ಸ್ಕ್ರಿಪ್ಟ್ ರೆಡಿ

ಬಾಲಿವುಡ್ ನಲ್ಲಿ ’ಹೇರಾಫೇರಿ’ ಕಾಮಿಡಿ ಫಿಲ್ಮ್ ನ್ನು ಯಾರೂ ಮರೆಯುವಂತಿಲ್ಲ. ಈ ಫಿಲ್ಮ್ ನ ಮೊದಲ ಪಾರ್ಟ್ ’ಹೇರಾಫೇರಿ’ ವರ್ಷ೨೦೦೦ ದಲ್ಲಿ ಬಂದಿತ್ತು. ಫಿಲ್ಮ್ ನ ಎರಡನೇ ಪಾರ್ಟ್ ವರ್ಷ ೨೦೦೬ರಲ್ಲಿ ಬಂದಿತ್ತು. ಈ ಫಿಲ್ಮ್ ನ ಮೂರನೇ ಪಾರ್ಟ್ ವರ್ಷ ೨೦೧೫ರಲ್ಲಿ ಘೋಷಣೆಯಾಗಿತ್ತು .
ಆದರೆ ನಟ ಮತ್ತು ಕಾಮಿಡಿಯನ್ ನೀರಜ್ ವೋರಾ ಅವರ ಸಾವಿನ ನಂತರ ಮೂರನೇ ಭಾಗದ ನಿರ್ಮಾಣ ಸುದ್ದಿ ತಣ್ಣಗಾಗಿತ್ತು.
ಇದೀಗ ೨೦೨೧ರಲ್ಲಿ ಫಿಲ್ಮ್ ಪ್ರೊಡ್ಯೂಸರ್ ಫಿರೋಜ್ ನಾಡಿಯಾಡ್ವಾಲಾ ಅವರು ಒಂದು ಸಂದರ್ಶನದಲ್ಲಿ ’ಹೇರಾಫೇರಿ ೩’ ಸ್ಕ್ರಿಪ್ಟ್ ರೆಡಿಯಾಗಿರುವುದನ್ನು ತಿಳಿಸಿದ್ದಾರೆ.


ಈ ಫಿಲ್ಮ್ ನ ಕಥೆ ಎಲ್ಲಿಂದ ಶುರುವಾಗುವುದು ಅಂದರೆ ಹೇರಾಫೇರಿ ಪಾರ್ಟ್ ಎರಡರ ಕೊನೆಯಿಂದ. ಶೀಘ್ರವೇ ಈ ಫಿಲ್ಮ್ ನ ಅಧಿಕೃತ ಘೋಷಣೆ ಮಾಡಲಾಗುವುದು. ಈ ಕತೆಯ ಐಡಿಯಾ ಕೇವಲ ಹೇರಾಫೇರಿ ೩ ಮಾತ್ರ ಅಲ್ಲ, ಇನ್ನೂ ಕೆಲವು ಹೇರಾಫೇರಿ…ಗಳ ನಿರ್ಮಾಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡಲಾಗುವುದು ಎಂದಿದ್ದಾರೆ ಫಿರೋಜ್.

’ದಿಲ್ ಧಡಕ್ ನೇ ದೋ’ ಫಿಲ್ಮ್ ನ ನಂತರ ಮತ್ತೊಮ್ಮೆ ಜೊತೆಯಾಗಿದ್ದಾರೆ ಅನಿಲ್ ಕಪೂರ್ -ರಣವೀರ್ ಸಿಂಗ್

ಫಿಲ್ಮ್ ’ದಿಲ್ ದಡಕ್ ನೇ ದೋ’ ನಂತರ ಮತ್ತೊಂದು ಬಾರಿ ರಣವೀರ್ ಸಿಂಗ್ ಮತ್ತು ಅನಿಲ್ ಕಪೂರ್ ಜೊತೆಯಾಗಿ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಆದರೆ ಈ ಬಾರಿ ಇವರು ಫಿಲ್ಮ್ ನಲ್ಲಿ ಅಲ್ಲ, ಒಂದು ಜಾಹೀರಾತುನಲ್ಲಿ ಜೊತೆಯಾಗಿದ್ದಾರೆ.
ಅನಿಲ್ ಕಪೂರ್ ಜೊತೆಗೆ ರಣವೀರ್ ಸಿಂಗ್ ಅವರು ತಾನು ಅಭಿನಯಿಸುವ ವಿಷಯದ ಈ ಘೋಷಣೆಯನ್ನು ಸೋಶಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.


ಈ ಬಗ್ಗೆ ರಣವೀರ್ ಬರೆಯುತ್ತಾ -“ಅನಿಲ್ ಕಪೂರ್ ಜೊತೆ ಸ್ಕ್ರೀನ್ ನಲ್ಲಿ ಮತ್ತೆ ಕಾಣಿಸಿಕೊಂಡದ್ದಕ್ಕೆ ತುಂಬಾ ಖುಷಿ” ಎಂದು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಇದರ ಖುಷಿಯನ್ನು ಬರೆಯಲು ಶಬ್ದಗಳಿಲ್ಲ” ಎಂದಿದ್ದಾರೆ.
ಅನಿಲ್ ಕಪೂರ್ ಅವರನ್ನು “ಬಾಲಿವುಡ್ ಇಂಡಸ್ಟ್ರಿಯ ಅತ್ಯುತ್ತಮ ನಟ” ಎಂದೂ ಶ್ಲಾಘಿಸಿದ್ದಾರೆ. ಜೋಯಾ ಅಖ್ತರ್ ಅವರ ನಿರ್ದೇಶನದಲ್ಲಿ ನಿರ್ಮಾಣವಾಗಿದ್ದ ಫಿಲ್ಮ್ ದಿಲ್ ಧಡಕ್ ನೇ ದೋ ಇದರಲ್ಲಿ ಅನಿಲ್ ಕಪೂರ್ ರಣವೀರ್ ಅವರ ತಂದೆಯ ಪಾತ್ರವನ್ನು ನಿರ್ವಹಿಸಿದ್ದರು. ನಿಜ ಜೀವನದಲ್ಲಿಯೂ ಅನಿಲ್ ಕಪೂರ್ ರಣವೀರ ಸಿಂಗ್ ರ ಸಂಬಂಧಿಕರೇ. ಅನಿಲ್ ಕಪೂರ್ ಪತ್ನಿ ಸುನೀತಾ ಕಪೂರ್ ಮತ್ತು ರಣವೀರ್ ತಂದೆ ಜಗಜಿತ್ ಸಿಂಗ್ ಭವನಾನಿ ಕಸಿನ್ ಆಗಿದ್ದಾರೆ.

’ರಯಾಂಬೊ’ ದಲ್ಲಿ ಟೈಗರ್ ಶ್ರಾಫ್ ಬದಲಿಗೆ ಪ್ರಭಾಸ್ ಆಯ್ಕೆ ಸಾಧ್ಯತೆ

ಸಿದ್ದಾರ್ಥ್ ಆನಂದ್ ನಿರ್ದೇಶನದಲ್ಲಿ ತಯಾರಾಗುವ ’ರ?ಯಾಂಬೊ’ ಫಿಲ್ಮ್ ನಲ್ಲಿ ಬಾಹುಬಲಿ ಫಿಲ್ಮ್ ನ ಪ್ರಖ್ಯಾತ ನಟ ಪ್ರಭಾಸ್ ಅವರನ್ನು ಟೈಗರ್ ಶ್ರಾಫ್ ರ ಜಾಗದಲ್ಲಿ ರಿಪ್ಲೇಸ್ ಮಾಡಬಹುದಾಗಿದೆ.


ರಿಪೋರ್ಟ್ ನ ಪ್ರಕಾರ ಇದಕ್ಕೆ ಕಾರಣ ಟೈಗರ್ ಶ್ರಾಫ್ ಬಳಿ ಫಿಲ್ಮ್ ಗಾಗಿ ಡೇಟ್ ಇಲ್ಲದಿರುವುದು. ಟೈಗರ್ ಶ್ರಾಫ್ ಈಗಾಗಲೇ ’ಗಣಪತ್’ ಪಾರ್ಟ್ ವನ್ ಮತ್ತು ಪಾರ್ಟ್ ಟು, ಹೀರೋಪಂತೀ ೨ ಮತ್ತು ’ಬಾಗೀ ೪’ ಫಿಲ್ಮ್ ಗಳಿಗಾಗಿ ತಮ್ಮ ಎಲ್ಲ ಡೇಟ್ಸ್ ನೀಡಿದ್ದಾರೆ. ಹೀಗಾಗಿ ಮುಂದಿನ ವರ್ಷದ ಕೊನೆಯವರೆಗೆ ಅವರ ಬಳಿ ಯಾವುದೇ ಡೇಟ್ಸ್ ಇಲ್ಲ .


ಈ ಕಾರಣ ಸಿದ್ದಾರ್ಥ್ ಆನಂದ್ ತಮ್ಮ ಫಿಲ್ಮ್ ಗಾಗಿ ಬೇರೆ ಆಕ್ಟರ್ ನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ.ಬಾಲಿವುಡ್ ರಿಪೋರ್ಟ್ ನಂತೆ ಅವರು ಪ್ರಭಾಸ್ ರನ್ನು ಅಪ್ರೋಚ್ ಮಾಡಿದ್ದಾರೆ.ಪ್ರಭಾಸ್ ಅವರಿಗೂ ಫಿಲ್ಮ್ ನ ಕಾನ್ಸೆಪ್ಟ್ ಇಷ್ಟ ಆಗಿದೆಯಂತೆ. ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ. ಪ್ರಭಾಸ್ ಫಿಲ್ಮ್ ಗೆ ಸಹಿ ಹಾಕಿದ್ದಾರೋ ಇಲ್ಲವೋ ಗೊತ್ತಿಲ್ಲ. ಸದ್ಯ ಅವರು ’ಆದಿಪುರುಷ್’ ಶೂಟಿಂಗ್ ನಲ್ಲಿ ಬಿಜಿ ಇದ್ದಾರೆ.

ರಶ್ಮಿಕಾ ಮಂದಣ್ಣ ರ ’ಗುಡ್ ಬೈ’ ಶೂಟಿಂಗ್ ಆರಂಭ

ಬಾಲಾಜಿ ಟೆಲಿಫಿಲ್ಮ್ಸ್ ಮತ್ತು ರಿಲಯನ್ಸ್ ಎಂಟರ್ಟೈನ್ಮೆಂಟ್ ನ ಅಪ್ ಕಮಿಂಗ್ ಫಿಲ್ಮ್ ಗುಡ್ ಬೈ ನ ಶೂಟಿಂಗ್ ಶುಕ್ರವಾರದಿಂದ ಆರಂಭವಾಗಿದೆ .


ಫಿಲ್ಮ್ ನ ನಿರ್ದೇಶನವನ್ನು ವಿಕಾಸ್ ಬಹಲ್ ಮಾಡುತ್ತಿದ್ದಾರೆ . ಈ ಫಿಲ್ಮ್ ನಲ್ಲಿ ಮಹಾನಾಯಕ ಅಮಿತಾಭ್ ಬಚ್ಚನ್ ಮತ್ತು ದಕ್ಷಿಣದ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿದ್ದಾರೆ. ಶುಕ್ರವಾರದಂದು ಫಿಲ್ಮ್ ನ ಮುಹೂರ್ತ ಶಾರ್ಟ್ ನ ಜೊತೆ ರಶ್ಮಿಕಾ ಅವರ ಶೂಟಿಂಗ್ ಆರಂಭವಾಯಿತು .
ಅಮಿತಾಭ್ ಬಚ್ಚನ್ ಎಪ್ರಿಲ್ ೪ ರಿಂದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಫಿಲ್ಮ್ ತಂದೆ ಮಗಳ ಸಂಬಂಧ ದ ಮೇಲಿದೆ.