ಅಕ್ಷಯ್ ಕುಮಾರ್ ರ ’ಬೆಲ್ ಬಾಟಮ್’ ಫಿಲ್ಮ್ ಓಟಿಟಿ ಯಲ್ಲಿ ಬಿಡುಗಡೆ, ಭಾರತಕ್ಕಾಗಿ ಇನ್ನಷ್ಟು ಆಕ್ಸಿಜನ್ ನೆರವಿಗೆ ಮುಂದಾದ ಅಕ್ಷಯ್-ಟ್ವಿಂಕಲ್

’ಲಕ್ಷ್ಮೀ’ ಫಿಲ್ಮ್ ನ ನಂತರ ಮತ್ತೊಮ್ಮೆ ಅಕ್ಷಯ್ ಕುಮಾರ್ ರ ಫಿಲ್ಮ್ ಓಟಿಟಿ ಪ್ಲ್ಯಾಟ್ ಫಾರ್ಮ್ ನಲ್ಲಿ ಬಿಡುಗಡೆಗೊಳ್ಳಲಿದೆ.
ಬಾಲಿವುಡ್ ವರದಿಯಂತೆ ನಿಖಿಲ್ ಆಡ್ವಾಣಿ ಅವರ ನಿರ್ದೇಶನದಲ್ಲಿ ತಯಾರಾಗಿರುವ ಬೆಲ್ ಬಾಟಮ್ ಫಿಲ್ಮ್ ನ್ನು ಮೇಕರ್ಸ್ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನ ಜೊತೆಗೆ ಡೀಲ್ ಮಾಡಿಕೊಂಡಿದ್ದಾರೆ.


ಇದಕ್ಕಿಂತ ಮೊದಲು ಅಮೆಜಾನ್ ಪ್ರೈಮ್ ವಿಡಿಯೋ ದ ಜೊತೆಗೆ ಮಾತುಕತೆ ನಡೆದಿತ್ತು. ಆದರೆ ಈ ನಡುವೆ ಹಾಟ್ ಸ್ಟಾರ್ ಹೆಚ್ಚಿನ ಹಣದ ಆಫರ್ ನೀಡಿ ತನ್ನ ಕಡೆಗೆ ಸೆಳೆದುಕೊಂಡಿತು. ಡೀಲ್ ನ ಮೊತ್ತ ಎಷ್ಟು ಕೋಟಿ ರೂಪಾಯಿ ಎಂದು ಇನ್ನೂ ಸ್ಪಷ್ಟ ತಿಳಿದುಬಂದಿಲ್ಲ.
ಜ್ಯಾಕಿ ಭಗ್ನಾನಿ ಬ್ಯಾನರ್ ನಲ್ಲಿ ನಿರ್ಮಿಸಲ್ಪಟ್ಟಿರುವ ಫಿಲ್ಮ್ ಮೊದಲು ಮೇ ೨೮ರಂದು ಟಾಕೀಸುಗಳಲ್ಲಿ ಬಿಡುಗಡೆ ಎಂದು ಹೇಳಲಾಗಿತ್ತು. ಕೊರೊನಾದ ಎರಡನೆಯ ಅಲೆಯ ಕಾರಣ ಓಟಿಟಿ ಪ್ಲ್ಯಾಟ್ ಫಾರ್ಮ್ ನಲ್ಲಿ ಬಿಡುಗಡೆಗೊಳ್ಳಲಿದೆ. ಈ ನಡುವೆ ಕೊರೊನಾದ ಎರಡನೇ ಅಲೆಯಲ್ಲಿ ತತ್ತರಿಸುತ್ತಿರುವ ದೇಶಕ್ಕೆ ಇನ್ನಷ್ಟು ಸಹಾಯ ಮಾಡಲು ಮುಂದಾದ ಅಕ್ಷಯ್ ಕುಮಾರ್ ಮತ್ತು ಪತ್ನಿ ಟ್ವಿಂಕಲ್ ಖನ್ನಾ ಯು.ಕೆ.ಯಿಂದ ೧೦೦ ಆಕ್ಸಿಜನ್ ಕನ್ಸಂಟ್ರೇಟರ್ ತರಿಸಿಕೊಂಡಿದ್ದರು.ಇದೀಗ ಮತ್ತೆ ೨೫೦ ಆಕ್ಸಿಜನ್ ಕನ್ಸಂಟ್ರೇಟರ್ ಮೆಷಿನ್ ಡೊನೇಟ್ ಮಾಡಿರುತ್ತಾರೆ.

ಎರಡು ಫಿಲ್ಮ್ ಗಳಲ್ಲಿ ಕಾಣಿಸಲಿದ್ದಾರೆ ಅನನ್ಯಾ ಪಾಂಡೆ

ಅನನ್ಯಾ ಪಾಂಡೆ ಶೀಘ್ರವೇ ೨ ಫಿಲ್ಮ್ ಗಳಲ್ಲಿ ಕಂಡು ಬರಲಿದ್ದಾರೆ. ಇವುಗಳಲ್ಲಿ ಒಂದು ಫಿಲ್ಮ್ ನ್ನು ಶಕುನ್ ಬತ್ರಾ ನಿರ್ದೇಶನ ಮಾಡುತ್ತಿದ್ದಾರೆ.
ಇದರಲ್ಲಿ ದೀಪಿಕಾ ಪಡುಕೋಣೆ ಮತ್ತು ಸಿದ್ಧಾಂತ ಚತುರ್ವೇದಿಯವರ ಜೊತೆ ಅನನ್ಯಾ ಪಾಂಡೆ ಕೂಡಾ ಅಭಿನಯಿಸಿದ್ದಾರೆ.


ಎರಡನೇ ಫಿಲ್ಮ್ ವಿಜಯ್ ದೇವರಕೊಂಡ ಅಭಿನಯದ ’ಲಾಯ್ಗರ್’ ಆಗಿದೆ. ಇದನ್ನು ಪ್ಯಾನ್ ಇಂಡಿಯಾ ನಿರ್ಮಿಸುತ್ತಿದೆ. “ನನಗೆ ಈ ಎರಡೂ ಫಿಲ್ಮ್ ಗಳು ಅತ್ಯಂತ ಮಹತ್ವದ್ದು ಮತ್ತು ಚಾಲೆಂಜಿಂಗ್ ಆಗಿದೆ. ಇವೆರಡು ಮೊದಲಿನ ಫಿಲ್ಮ್ ಗಳಿಗಿಂತ ಭಿನ್ನವಾಗಿವೆ. ಶಕುನ್ ಬತ್ರಾ ಅವರ ಈತನಕದ ನಿರ್ದೇಶನಕ್ಕಿಂತ ಇದನ್ನು ಭಿನ್ನವಾಗಿ ತಂದಿದ್ದಾರೆ. ಇದೇ ರೀತಿ ಪುರಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ತಯಾರಾಗಿರುವ ’ಲಾಯ್ಗರ್’ ಫಿಲ್ಮ್ ಕೂಡಾ ಪ್ರೇಕ್ಷಕರಿಗೆ ಬಹಳ ಇಷ್ಟವಾಗಬಹುದಾದ ಫಿಲ್ಮ್ ಆಗಿದೆ” ಎಂದಿದ್ದಾರೆ ಅನನ್ಯಾ.

ಮಾಧುರಿ ದೀಕ್ಷಿತ್ ರ ನೂತನ ಡ್ಯಾನ್ಸ್ ಕ್ಯಾಂಪೆನ್: ಜನರಲ್ಲಿ ಉತ್ತಮ ವಿಚಾರಗಳನ್ನು ಚಿಂತಿಸುವಂತೆ ಮಾಡುವ ಉದ್ದೇಶ.

ವಿಶ್ವ ಡ್ಯಾನ್ಸ್ ಡೇ ಪ್ರಯುಕ್ತ ನಟಿ ಮಾಧುರಿ ದೀಕ್ಷಿತ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಡ್ಯಾನ್ಸ್ ಕ್ಯಾಂಪೇನ್ ಯುನೈಟೆಡ್ ಬೈ ಡ್ಯಾನ್ಸ್ ಆರಂಭಿಸಿದ್ದಾರೆ. ಇದರ ಉದ್ದೇಶ ಕೊರೊನಾ ಮಹಾಮಾರಿಯ ನಡುವೆ ಜನರಲ್ಲಿ ಪಾಸಿಟಿವಿಟಿ ಯೋಚನೆಗಳನ್ನು ಹರಡಿಸುವುದು ಆಗಿದೆ.


ಅವರು ಇದನ್ನು ಲಾಂಚ್ ಮಾಡುತ್ತಾ “ಈ ಕ್ಯಾಂಪೇನ್ ನ ಉದ್ದೇಶ ಡ್ಯಾನ್ಸ್ ನ ಮೂಲಕ ಜನರಲ್ಲಿ ಪಾಸಿಟಿವಿಟಿ, ಸಾಮಾಜಿಕ ಸಂಬಂಧ ಬೆಳೆಸುವುದು ಮತ್ತು ಮೆಂಟಲ್- ಫಿಜಿಕಲ್ ಆರೋಗ್ಯವನ್ನು ಹೆಚ್ಚಿಸುವುದಾಗಿದೆ.” ಎಂದಿದ್ದಾರೆ.


ವಿಶ್ವಾದ್ಯಂತ ಭಾಗವಹಿಸುತ್ತಿರುವ ಡ್ಯಾನ್ಸರ್ ಮತ್ತು ಕೊರಿಯೋಗ್ರಾಫರ್ ಗಳ ಜೊತೆಜೊತೆಗೆ ಮಾಧುರಿ ಅವರ ಜೊತೆಗೂ ಡ್ಯಾನ್ಸ್ ಮಾಡುವ ಅವಕಾಶ ಇಲ್ಲಿ ಸಿಗುವುದು.
ಕೊರೊನಾ ಮೊದಲ ಅಲೆಯ ನಡುವೆಯೂ ಮಾಧುರಿ ಅವರು ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸಿಗೆ ಸಂಬಂಧಿಸಿದ ಕ್ಯಾಂಪೇನ್ ಆರಂಭಿಸಿದ್ದರು.