ಅಕ್ಷಯಗೆ ಪಿಎಚ್ ಡಿ ಪದವಿ


ಸಂಜೆವಾಣಿ ವಾರ್ತೆ
ಹೊಸಪೇಟೆ:ಮೇ,19- ನಗರದ ನಿವಾಸಿ ಅಕ್ಷಯ್‌ ಎಸ್. ದೇಸಾಯಿಯವರು ಮಂಡಿಸಿದ ಮಹಾ ಪ್ರಬಂಧಕ್ಕೆ ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)  ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.
ಐಐಟಿ ಧಾರವಾಡದ ಡಾ.ಅಮರ್ ಗಾಂವಕರ ಹಾಗೂ ಪಶ್ಚಿಮಬಂಗಾಳದ ಬರದ್ವಾನ ವಿಶ್ವವಿದ್ಯಾಲಯದ ಡಾ.ಆನಂದ ಮೊಯ್ ಮುಖ್ಯೋಪಾಧ್ಯಾಯ ಅವರ ಮಾರ್ಗದರ್ಶನದಲ್ಲಿ “ಇನ್ಸ್ಟೆಬಿಲಿಟೀಸಇನ್ ದ ಥಿನ್ಫಿಲ್ಮಫ್ಲೊಸ್: ಎಫೆಕ್ಟ್‌
ಆಫ್ ಆಡ್ ವಿಸ್ಕೊಸಿಟಿʼಎಂಬ ವಿಷಯದ ಕುರಿತು ಅಕ್ಷಯ್‌ ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಗಿದೆ.
ಮೂಲತಃ ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಆಡೂರು ಗ್ರಾಮದವರಾದ ಇವರು ಹೊಸಪೇಟೆಯಲ್ಲಿ ನೆಲೆಸಿದ್ದಾರೆ. ಇವರು ಧಾರವಾಡದಲ್ಲಿ ಎಂಜಿನಿಯರಿಂಗ್ ಪದವಿ ಮತ್ತು ಬೆಂಗಳೂರಿನ ಆರ್‌ವಿ ಎಂಜನಿಯರಿಂಗ್‌ ಕಾಲೇಜ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.