ಅಕ್ಷತೆಯಂಗಳದಲ್ಲಿ ಅಕ್ಷರದ ಓಂಕಾರ

ಯಾದಗಿರಿ : ಜೂ.17:ತಮ್ಮ ಮನೆಯ ವಿಷ್ಮಯ ಮುದ್ದು ಜಾದುಗಾರನಂತಿರುವ ಕಂದಮ್ಮ ಗುರುವಿನ ಬಳಿಗೆ ತೆರಳುವ ದಿನಕ್ಕಾಗಿ ಕಾದು ಕುಳಿತಿದ್ದ ಕುಟುಂಬದ ಸಂತಸವನ್ನು ಇಮ್ಮಡಿಗೊಳಿಸಲು ನಗರದ ಶಾಂತಿ ಸದನ ಶಾಲಾ ಆಡಳಿತ ಮಂಡಳಿ ತಳಿರು ತೋರಣಗಳಿಂದ ಶಾಲೆಯನ್ನು ಶೃಂಗಾರಗೊಳಿಸಿ ಸಜ್ಜಾಗಿಸಿತ್ತು.
ಶಾಲೆಯ ಕೋಣೆಯೊಂದರಲ್ಲಿ ಮಕ್ಕಳಿಗೆ ಅಕ್ಷರಭ್ಯಾಸಕ್ಕಾಗಿ ವೇದಿಕೆ ಕಲ್ಪಿಸಲಾಗಿತ್ತು. ಅಕ್ಷರಭ್ಯಾಸಕ್ಕೆ ಮೊದಲ ಗುರುವಾಗಿ ಶ್ರೀಕಾಂತ ಆಚಾರ್ಯರರು ಆಗಮಿಸಿದ್ದರು. ದೇವನಾಮಾಂಕುರದೊಂದಿಗೆ ಪ್ರಾರಂಭವಾದ ಪ್ರಾರ್ಥನೆ, ಪೂಜೆಯೊಂದಿಗೆ ಅಕ್ಷರಭ್ಯಾಸ ನಡೆಯಿತು. ಅಕ್ಷತೆಯ ತಟ್ಟೆಯಲ್ಲಿ ಮಗುವಿನ ಪಾಲಕರು ಮಗುವಿನ ಕೈ ಹಿಡಿದು ಆಚಾರ್ಯರು ಹೇಳಿದಂತೆ ಓಂಕಾರಕ್ಕೆ ಅಂಕಿತ ಹಾಕುವ ಮೂಲಕ ತಮ್ಮ ಮಗುವಿನ ಅಕ್ಷರಭ್ಯಾಸಕ್ಕೆ ಸಾಕ್ಷಿಯಾದರು.
ಅಮ್ಮನ ತೋಳಲ್ಲಿ ನಲಿದಾಡುತ್ತಾ, ಅಪ್ಪನ ಮುಖದಲ್ಲಿ ಆಟವಾಡುತ್ತಾ ತನ್ನ ಕಾಲಮೇಲೆ ನಿಲ್ಲಲು ಶ್ರಮ ಪಡುತ್ತಿದ್ದ ಮಗುವೊಂದು ಬೆಳೆಬೆಳೆಯುತ್ತಾ ಅಕ್ಷರಭ್ಯಾಸಕ್ಕಾಗಿ ಗುರುವಿನ ಬಳಿಗೆ ಬರುವ ಮೊದಲ ದಿನದ ಸಂಭ್ರಮಕ್ಕೆ ವೇದಿಕೆ ಸಿಕ್ಕಿದ್ದರಿಂದ ಅಲ್ಲಿನ ಪಾಲಕರಲ್ಲಿ ಸಂತಸ ಮನೆ ಮಾಡಿತ್ತು.
ಶಾಂತಿ ಸದನ ಶಾಲೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಶಾಲೆ ಆಡಳಿತ ಮಂಡಳಿ ಅಧ್ಯಕ್ಷರಾದ ಸಾಹೇಬರೆಡ್ಡಿ ಬಕ್ಕಾ, ಕಾರ್ಯದರ್ಶಿ ಬಸವಂತರೆಡ್ಡಿ ವೀರೆಡ್ಡಿ, ಪ್ರಾಂಶುಪಾಲರಾದ ಸಂತೋಷ ದಾಸ, ಶಿಕ್ಷಕಿಯರಾದ ಜ್ಯೋತಿ, ರಾಧಿಕಾ, ನಾಗಶ್ರೀ, ರೇಣುಕಾ ಹೊಸಮನಿ, ರಾಜೇಶ್ವರಿ, ಅಶ್ವಿನಿ ಸೇರಿದಂತೆ ಶಾಲೆಯ ಶಿಕ್ಷಕರು, ಪಾಲಕರು ಇದ್ದರು.


ಸಂಸ್ಕಾರದ ಜೊತೆ ಆಟ, ಪಾಠವನ್ನು ಕಲಿಸಲೋಸುಗ ಉತ್ತಮ ಪರಿಸರ ನಿರ್ಮಿಸುವ ಉದ್ದೇಶದಿಂದ ಮಕ್ಕಳ ಮನೆಯನ್ನು ನಮ್ಮ ಶಾಲೆಯಲ್ಲಿ ಆರಂಭಿಸಿದ್ದೇವೆ. ಮಗುವಿನ ನಗು, ಅಳು, ಉಸಿ ಕೋಪಗಳ ಬೆಸುಗೆಯ ಜೊತೆಗೆ ಸಂಸ್ಕøತಿ, ಅವರ ಮೋಜು, ಮಸ್ತಿ, ಆಟ ಪಾಟಗಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲು ಒಂದು ಶಿಕ್ಷಕರ ತಂಡವೇ ನಮ್ಮ ಶಾಲೆಯಲ್ಲಿದೆ.

ಬಸವಂತರೆಡ್ಡಿ ವೀರೆಡ್ಡಿ ಕಾರ್ಯದರ್ಶಿಗಳು ಶಾಂತಿ ಸದನ ಶಾಲೆ ಯಾದಗಿರಿ