ಅಕ್ರಮ ಹಣ ವಶ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮಾ.26:  ತಾಲ್ಲೂಕಿನ ಇಟಿಗಿಹಾಳ ಗ್ರಾಮದ ಚೆಕ್ ಪೋಸ್ಟ್ ಬಳಿ ಸೀಮಾಂಧ್ರ ಪ್ರದೇಶದ ಗಡಿಗ್ರಾಮ ಹರಿವಾಣದಿಂದ ಆಧೋನಿಗೆ ಸೂಕ್ತ ದಾಖಲೆಗಳು ಇಲ್ಲದೆ ಪರಮೇಶ(23) ಯುವಕ ಅಕ್ರಮವಾಗಿ ಸಾಗಿಸುತ್ತಿದ್ದ 413500ರೂಗಳನ್ನು ಚೆಕ್ ಪೋಸ್ಟ್ ಅಧಿಕಾರಿ ಎಚ್.ಆಲಂ ಪಾಷ ತಪಾಸಣೆ ನಡೆಸಿದಾಗ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತಿದ್ದ ಅಕ್ರಮ ಹಣ ವಶಪಡಿಸಿಕೊಂಡಿದ್ದಾರೆ,  ಈ ಕುರಿತು ತನಿಖೆ ನಡೆಸಿದಾಗ ಹಣಕಾಸಿಗೆ ಸಂಬಂಧಿಸಿದ ದಾಖಲೆಗಳಿಲ್ಲದೆ ಇದ್ದರಿಂದ ಪ್ರಕರಣ ದಾಖಲಿಸಿ ಹಣ ವಶಪಡಿಸಿಕೊಳ್ಳಲಾಗಿದೆಂದು ಸಿಪಿಐ ಯಶವಂತ ಬಿಸನ್ನಳ್ಳಿ ಹೇಳಿದರು.

One attachment • Scanned by Gmail