ಅಕ್ರಮ ಸ್ಪಿರಿಟ್‌ ಸಾಗಾಟ: ಸೆರೆ

ಕಾಸರಗೋಡು, ಜು.೨೯- ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು ಒಂದು ಸಾವಿರ ಲೀಟರ್ ಸ್ಪಿರಿಟ್ ಅನ್ನು ಡಿವೈಎಸ್ಪಿ ವಿ.ವಿ ಮನೋಜ್ ನೇತೃತ್ವದ ತಂಡವು ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ.
ಕುಂಜತ್ತೂರು ಅಣ್ಣಮಜಲಿನ ರವಿ ಕಿರಣ್ (೩೧) ಎಂಬಾತನನ್ನು ಬಂಧಿಸಲಾಗಿದೆ. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮಂಜೇಶ್ವರ ಬಳಿ ಸ್ಕಾರ್ಫಿಯೋ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಸ್ಪಿರಿಟ್ ಪತ್ತೆಯಾಗಿದೆ. ಕ್ಯಾನ್‌ಗಳಲ್ಲಿ ತುಂಬಿಸಿ ಸ್ಪಿರಿಟನ್ನು ಸಾಗಿಸಲಾಗುತ್ತಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.