ಬೈಲಹೊಂಗಲ,ಮಾ26: ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಗೋವನಕೊಪ್ಪ ಗ್ರಾಮದ ಬಸವಣ್ಣೆಪ್ಪ ಹುಲಮನಿ (48) ಎಂಬಾತನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.
ಅಕ್ರಮ ಸಾರಾಯಿ ಸಾಗಾಣಿಕೆಯ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಶನಿವಾರ ರಾತ್ರಿ ಬುಡರಕಟ್ಟಿ ಗ್ರಾಮದಿಂದ ದೊಡವಾಡ ಗ್ರಾಮಕ್ಕೆ ಹೋಗುವ ದೊಡವಾಡ ಕ್ರಾಸ್ ನಲ್ಲಿ ದ್ವಿ ಚಕ್ರ ವಾಹನದಲ್ಲಿ 28,372 ರೂ ಮೌಲ್ಯದ 8,640 ಲೀಟರ್ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ವಾಹನ ಜಪ್ತ ಮಾಡಲಾಗಿದೆ. ವಲಯ ಅಬಕಾರಿ ನಿರೀಕ್ಷಕರಾದ ಬಸವರಾಜ್ ಎಸ್.ಮುಡಶಿ ಪ್ರಕರಣ ದಾಖಲಿಸಿದ್ದಾರೆ.
ದಾಳಿಯಲ್ಲಿ ಅಬಕಾರಿ ಸಬ್ ಇನ್ಸಪೆಕ್ಟರ್ ಡಿ. ಎಸ್. ತಲ್ಲೂರ, ಸಿಬ್ಬಂದಿ ಗಳಾದ ವಿ. ಎಂ. ಕೇರಾಳಿ, ಎ. ಎಸ್. ಜಾಲಿಕಟ್ಟಿ, ಎಂ. ಬಿ. ಮುಲ್ಲಾ, ಶ್ರೀಮತಿ ಶ್ರೀದೇವಿ ಎಸ್. ಬಿರಾದಾರ, ಎ.ವಾಯ್. ಬಮ್ಮಿಗಟ್ಟಿ ಭಾಗವಹಿಸಿದ್ದರು.