ಅಕ್ರಮ ಸಾರಾಯಿ ಸಾಗಾಟ: ಬಂಧನ

ಬೈಲಹೊಂಗಲ, ಏ3: ತಾಲೂಕಿನ ಮೇಕಲಮರಡಿ ಕ್ರಾಸ್ ಬಳಿ ಅಕ್ರಮ ಸಾರಾಯಿ ಸಾಧಿಸುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.
ಮಕ್ತುಮಸಾಬ್ ಗೋರೆಸಾಬ್ ಶಿಲೇದಾರ(60) ತಾಲೂಕಿನ ಮೇಕಲಮರಡಿ ಕ್ರಾಸ್ ಬಳಿ ರವಿವಾರ ರಾತ್ರಿ 8 ಗಂಟೆ ಸಮಯದಲ್ಲಿ 10,120 ಮೌಲ್ಯದ 25.92 ಲೀಟರ್ ಸಾರಾಯಿ ಸಾಗಿಸುತ್ತಿದ್ದ ವೇಳೆ ಅಬಕಾರಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.ವ್ಯಕ್ತಿಯನ್ನು ಬಂಧಿಸಿ ವಾಹನವನ್ನು ಜಪ್ತ ಮಾಡಿದ ವಲಯ ಅಬಕಾರಿ ವೃತ್ತ ನಿರೀಕ್ಷಕರಾದ ಬಸವರಾಜ ಮೂಡಿಸಿ ಪ್ರಕರಣ ದಾಖಲಿಸಿದ್ದಾರೆ.
ಅಬಕಾರಿ ಸಬ್ ಇನ್ಸಪೆಕ್ಟರ್ ಡಿ. ಎಸ್. ತಲ್ಲೂರ ಸೇರಿದಂತೆ ಸಿಬ್ಬಂದಿಗಳು ದಾಳಿಯಲ್ಲಿ ಭಾಗಿಯಾಗಿದ್ದರು.