ಅಕ್ರಮ ಸರಾಯಿ : 62 ಸಾವಿರ ಮೌಲ್ಯದ ಮದ್ಯ ವಶ

ಅಥಣಿ : ನ.29:ಪಟ್ಟಣದಿಂದ ಸತ್ತಿ ಗ್ರಾಮಕ್ಕೆ ಅಕ್ರಮವಾಗಿ ಮಾರಾಟ ಮಾಡಲು ಸಾಗಿಸುತ್ತಿದ್ದ ವಾಹನದ ಖಚಿತ ಮಾಹಿತಿ ಪಡೆದ ಅಥಣಿ ಪೆÇಲೀಸರು ಇಬ್ಬರು ಆರೋಪಿಗಳನ್ನು ಬಂದಿಸಿ ಅವರಿಂದ 16 ಬಾಕ್ಸ್ ಗಳ ಸು. 62 ಸಾವಿರ ಮೌಲ್ಯದ ಅಕ್ರಮ ಸರಾಯಿ ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ಮೂಲದ ಎ???ಚ್ 09 ಎಬಿ 6630 ವಾಹನದಲ್ಲಿ ಸಾರಾಯಿ ಬಾಕ್ಸ್ ಗಳನ್ನು ತುಂಬಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಕೂಡಲೇ ಅಥಣಿ ಪಿಎಸ್‍ಐ ಎಸ್ ಎಮ್ ಕಾರಜೋಳ ಹಾಗೂ ಅವರ ಸಿಬ್ಬಂದಿ ಪಟ್ಟಣದ ಹೊರವಲಯದ ಸಾಯಿ ನಗರದ ಹತ್ತಿರ ಸತ್ತಿ ರಸ್ತೆಯಲ್ಲಿ ವಾಹನದ ಮೇಲೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂದಿಸಿ ಅವರಿಂದ ಸರಾಯಿ ತುಂಬಿದ ಹದಿನಾರು ಬಾಕ್ಸ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಅಥಣಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.