ಅಕ್ರಮ ಸಕ್ರಮ ಯೋಜನೆಯಡಿ ಹಕ್ಕು ಪತ್ರ ನೀಡಲು ಆಗ್ರಹಿಸಿ ಪ್ರತಿಭಟನೆ

ಚಿಂಚೋಳಿ.ನ.21- ಪಟ್ಟಣದ ತಹಸಿಲ್ ಕಾರ್ಯಾಲಯ ಎದುರು ಪೆÇೀಲಕಪಳ್ಳಿ ಗ್ರಾಮದ ಸರ್ಕಾರಿ ಜಮೀನಿನ ನಿವಾಸಿಗಳಿಗೆ ಅಕ್ರಮ ಸಕ್ರಮ ಯೋಜನೆಯಡಿ ಹಕ್ಕು ಪತ್ರಗಳನ್ನು ವಿತರಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಮಾಜ ಜಾಗರಣ ಮಂಚದ ಕಲ್ಯಾಣ ಕರ್ನಾಟಕ ಘಟಕದ ಅಧ್ಯಕ್ಷರಾದ ರಮೇಶ ಯಾಕಾಪೂರ ಅವರು, ತಾಲೂಕಿನ ಪೆÇೀಲಕಪಳ್ಳಿ ಗ್ರಾಮದ ಸರ್ಕಾರಿ ಜಮೀನು ಸರ್ವೆ ನಂಬರ 46 ರಲ್ಲಿ ಸುಮಾರು 10 ವರ್ಷ ಕಾಲ ಮೇಲ್ಪಟ್ಟು ಅವಧಿಯಿಂದ ಅಕ್ರಮವಾಗಿ ನಿವಾಸದ ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದವರಿಗೆ ಕಳೆದ 2019 20 ನೇ ಸಾಲಿನಲ್ಲಿ ಅಕ್ರಮ-ಸಕ್ರಮ ಯೋಜನೆ ಅಡಿಯಲ್ಲಿ ಹಕ್ಕುಪತ್ರ ನೀಡಲು ಸರ್ಕಾರ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಸೂಚಿಸಲಾಯಿತು ಆದರೆ ಲೋಕಸಭಾ ಚುನಾವಣೆ ಘೋಷಣೆ ನಿರ್ಮಿತವಾಗಿ ನಿಗದಿತ ಕೊನೆಯ ದಿನಾಂಕ ಮುಟುಕುಗೊಳಿಸಿ ಆನ್ಲೈನ್ ತಂತ್ರ ನಿಲ್ಲಿಸಿತದೆ ಇದರಿಂದ ಅಕ್ರಮವಾಗಿ ನಿವಾಸದ ಸದಸ್ಯರಿಗೆ ಅವಕಾಶದಿಂದ ವಂಚಿತರಾಗಿದ್ದಾರೆ ಕೂಡಲೇ ಸರ್ಕಾರ ಅಕ್ರಮ-ಸಕ್ರಮ ಆನ್ಲೈನ್ ಮುಖಾಂತರಗಳನ್ನು ತೆಗೆದುಕೊಂಡು ಮನೆ ಹಕ್ಕು ಪತ್ರಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದರು.
ಮನೆ ಕಟ್ಟಿಕೊಂಡವರ ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಹಕ್ಕುಪತ್ರ ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು, ತಹಸಿಲ್ದಾರ್ ಅರುಣ್ ಕುಮಾರ್ ಕುಲ್ಕರ್ಣಿ ಅವರಿಗೆ ಬೇಡಿಕೆಯ ಮನಿ ಪತ್ರವನ್ನು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ವಿಜಯ ಕುಮಾರ ಶಾಬಾದಿ. ಮಾಣಿಕ. ಕಾಮಾಕ್ಷಿ. ಇಮಾನವೆಲ್. ಲಕ್ಷ್ಮಣ್. ರಘುನಾಥ. ಹಜಿಸಾಬ. ದಶರಥ. ಓಂಕಾರ. ಸವಿತಾ. ಮತ್ತು ಅನೇಕ ಅಕ್ರಮ ಸಕ್ರಮ ಮನೆ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.