ಅಕ್ರಮ ಸಕ್ರಮ ಮಂಜೂರಾತಿ ಪತ್ರ ನೀಡಲು ಪ್ರತಿಭಟನೆ

ಮೈಸೂರು:ಜ:12: 13/3/2018ರಂದು ನಡೆದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯ ನಡವಳಿಯ ಪುಸ್ತಕದ 74ಮತ್ತು 75ನೇ ಪುಟದಲ್ಲಿ ಯಾರಿಗೂ ಮಂಜೂರಾಗದೆ ಇರುವ 208ಮನೆಗಳನ್ನು 25ವರ್ಷಗಳಿಂದ ವಿದ್ಯುತ್ ಬಿಲ್ ಮತ್ತು ನೀರಿನ ಬಿಲ್ ನ್ನು ಕಟ್ಟಿಕೊಂಡು ಶಿಥಿಲವಾಗಿದ್ದ ಮನೆಯನ್ನು ರಿಪೇರಿ ಮಾಡಿಕೊಂಡು ಸ್ವಾಧೀನದಲ್ಲಿರುವ ಫಲಾನುಭವಿಗಳಿಗೆ ಸರ್ಕಾರದ ಅಧಿಸೂಚನೆಯಂತೆ ಅಕ್ರಮ- ಸಕ್ರಮಕ್ಕೆ ಆದೇಶವಾಗಿದ್ದು ಮಂಜೂರಾತಿ ಪತ್ರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ವತಿಯಿಂದ ಸಾಂಕೇತಿಕ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕರ್ನಾಟಕ ರಾಜ್ಯ ಪತ್ರ ಅಧಿಸೂಚನೆ ಸಂಖ್ಯೆ ಸಂವ್ಯಶಾ ಇ 52 ಶಾಸನ 2016 28/5/2020 ರ ಆದೇಶದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 1985ರಲ್ಲಿ ಹುಡ್ಕೋ ಮನೆಗಳು, ಒವೈಹೆಚ್ ಎಸ್ ಮನೆಗಳು, ಬ್ಯಾಂಕ್ ನೆರವಿನ ಯೋಜನೆಯ ಮನೆಗಳಿಂದ 12,145 ಮನೆಗಳು ನಿರ್ಮಾಣಗೊಂಡಿದೆ.
ಈ ಮನೆಗಳಿಗೆ 13/3/2018ರಂದು ನಡೆದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯ ನಡವಳಿ ಪುಸ್ತಕದ 74ಮತ್ತು 75ನೇ ಪುಟದಲ್ಲಿ ಕಾಣಿಸಿರುವಂತೆ ಯಾರಿಗೂ ಮಂಜೂರಾಗದೆ ಇರುವ 208ಶಿಥಿಲವಾಗಿದ್ದ ಮನೆಗಳನ್ನು ರಿಪೇರಿ ಮಾಡಿಸಿಕೊಂಡು ಸುಮಾರು 25ವರ್ಷಗಳಿಂದ ವಿದ್ಯುತ್ ಬಿಲ್, ನೀರಿನ ಬಿಲ್ ಪಾವತಿಸಿಕೊಂಡು ಸ್ವಾಧೀನದಲ್ಲಿರುವ ಬಡವರು, ದಲಿತರು, ಹಿಂದುಳಿದ ವರ್ಗದ ಕೂಲಿಕಾರ್ಮಿಕರಾದ ಫಲಾನುಭವಿಗಳು, ಮಕ್ಕಳು, ಮೊಮ್ಮಕ್ಕಳಾದಿಯಾಗಿ 25ವರ್ಷಗಳಿಂದ ಯಾರಿಗೂ ಮಂಜೂರಾಗದೆ ಇರುವ 208ಮನೆಗಳಲ್ಲಿ ವಿದ್ಯುತ್ ಬಿಲ್, ನೀರಿನ ಬಿಲ್, ಗ್ಯಾಸ್ ಬಿಲ್, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮಕ್ಕಳ ವಿದ್ಯಾಭ್ಯಾಸಕ್ಕೆ ಈ ವೀಳಾಸವನ್ನೇ ಕೊಡಲಾಗಿದೆ.
ಹೀಗಿರುವಾಗ 208 ಮನೆಗಳಲ್ಲಿರುವ ಸ್ವಾಧೀನದಾರರಿಗೆ 1985ನೇ ಸಾಲಿನಲ್ಲಿ ಈ ಮನೆಗಳಿಗೆ ಇದ್ದ ಬೆಲೆಯನ್ನೇ ಕಟ್ಟಿಸಿಕೊಂಡು ಮಂಜೂರಾತಿ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷರಾದ ವಿ.ಪಿ.ಸುಶೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪುಟ್ಟರಾಜು, ಅಮೀನ ಬೇಗಂ, ಕಾರ್ಯದರ್ಶಿ ಮಹಮ್ಮದ್ ಹರ್ಷ, ಎಂ.ಮಾದೇಶ ,ಲೀಲಾವತಿ ಸೇರಿದಂತೆ ಇತರರಿದ್ದರು.ಅಕ್ರಮ ಸಕ್ರಮ ಮಂಜೂರಾತಿ ಪತ್ರ ನೀಡಲು ಪ್ರತಿಭಟನೆ