ಅಕ್ರಮ ರಿವಾಲ್ವರ್ ಜಪ್ತಿ: ಇಬ್ಬರ ಬಂಧನ

ಬೀದರ್:ಎ.1: ಇಬ್ಬರು ಸಂಶಯಾಸ್ಪದ ವ್ಯಕ್ತಿಗಳನ್ನು ಪತ್ತೆ ಹಚ್ಚಿದ ರೌಡಿ ನಿಗ್ರಹ ದಳವು ಅವರಿಂದ ಪರವಾನಗಿ ಇಲ್ಲದ ಎರಡು ರಿವಾಲ್ವರ್‍ಗಳನ್ನು ವಶಪಡಿಸಿಕೊಂಡು ಇಬ್ಬರನ್ನು ದಸ್ತಗಿರಿ ಮಾಡಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಚನ್ನಬಸವಣ್ಣ.ಎಲ್ ತಿಳಿಸಿದರು.

ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳ ಕಚೇರಿ ಅವರಣದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಬೀದರ ನಗರ ರೌಡಿ ನಿಗೃಹ ತಂಡದ ಅಧಿಕಾರಿ ಹಾಗೂ ಗಾಂಧಿ ಗಂಜಿ ಪೆÇಲೀಸ್ ಠಾಣೆ ಇನ್ಸಪೆಕ್ಟರ್ ಎ.ಎಸ್.ಐ. ವಿನಾಯಕ, ಎ.ಎಸ್.ಐ ವಿಜಯಕುಮಾರ ಬಾಳುರ ಮತ್ತು ಸಿಬ್ಬಂದಿಯವರಾದ ನವೀನ್, ಅನೀಲಕುಮಾರ, ಆರೀಫ್, ಇರ್ಫಾನ, ಗಂಗಾಧರ, ಪ್ರವೀಣ, ರಾಜಕುಮಾರ, ಎಷ್ಟು ರೆಡ್ಡಿ, ಇಸ್ಮಾಯಿಲ್, ಜೀವ ಚಾಲಕ ಪಕ ರವರನ್ನ ಒಳಗೊಂಡ ತಂಡವು ನಿನ್ನೆ ರಾತ್ರಿ 1000 ಗಂಟೆಗೆ ನಗರದ ಗುಂಪಾ ರಿಂಗ ರೋಡ ಹತ್ತಿರ ಖಚಿತ ಮಾಹಿತಿ ಮೇರೆಗೆ ಒಬ್ಬ ಆರೋಪಿತನನ್ನು ದಸ್ತಗಿರಿ ಮಾಡಿ ಆತನಿಂದ ಅಕ್ರಮವಾಗಿ ಹೊಂದಿದ ಒಂದು ಕಂಟ್ರಿ ಮೇಡ ಪಿಸ್ತುಲ’ (PISಖಿಔಐ) ಜಪ್ತಿ ಮಾಡಿಕೊಳ್ಳಲಾಗಿದೆ. ಆತನು ಪದವಿ ಪಡೆದವನಾಗಿದ್ದು, ಬೆಳಗಾವಿ, ಪುಣೆ, ಮುಂಬೈ ಕಡೆ ಓಡಾಡಿಕೊಂಡಿರುತ್ತಾನೆ. ಆತನ ಕ್ರಮಿನಲ್ ವ್ಯವಹಾರಗಳ ಬಗ್ಗೆ ಇನ್ನು ಪತ್ತೆ ಹಚ್ಚಬೇಕಿದೆ. ದಸ್ತಗಿರಿ ಮಾಡಿದ ಆರೋಪಿತನಿಗೆ ನ್ಯಾಯಾಲಯದಲ್ಲಿ ಹಾಜರ ಪಡಿಸಲಾಗುವದು ಎಂದು ತಿಳಿಸಿದರು.

ಹಾಗೇ ಹುಮನಾಬಾದ ಸಹಾಯಕ ಪೆÇಲೀಸ್ ಅಧೀಕ್ಷಕ ರಾಜಮತ ಮಾರ್ಗದರ್ಶನದಲ್ಲಿ ಮಂಠಾಳ ಸಿ.ಪಿ.ಐ ವಿಜಯಕುಮಾರ ತಮ್ಮ ಖಚಿತ ಮಾಹಿತಿಯೊಂದಿಗೆ ಉಪ ವಿಭಾಗ ಪಂಚರನ್ನು ಕರೆದುಕೊಂಡು ಬಸವಕಲ್ಯಾಣ ತಾಲೂಕಿನ ಖಾನಾಪೂರ (ಬಿ) ಹಣಮಂತವಾಡಿ ಎಂಬ ರೋಡಿನ ಕಡೆಗೆ ಹೋಗುವಾಗ ಒಬ್ಬ ವ್ಯಕ್ತಿ ತನ್ನ ಸೋಂಟದ ಹತ್ತಿರ ಅಂಗಿಯನ್ನು ಮೇಲಕ್ಕೆ ಮಾಡಿ ತನ್ನ ಸೊಂಟಕ್ಕೆ ಒಂದು ರಿವಾಲ್ವರ್ ಕಾಣುವಂತೆ ಸಿಗಿಸಿಕೊಂಡು ನಿಂತಿದ್ದು ಅವನ್ನು ನೋಡಿ ಅವನಿಗೆ ವಶಕ್ಕೆ ಪಡೆದುಕೊಂಡು ಅವನ ಹತ್ತಿರ ಇದ್ದ ಕಪ್ಪು ಬಣ್ಣದ ರಿವಾಲ್ವರ ಆದರ ಮೇಲೆ 4221 ನಂಬರ ಇರುತ್ತದೆ. ಅದರ ಚಂಬರನಲ್ಲಿ 6 ಗುಂಡುಗಳು ಇರುತ್ತವೆ. ಆದರ ಅಂದಾಜು 1.40,000/- ಬೆಲೆ ಬಾಳುವುದು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಆ ವ್ಯಕ್ತಿಗೆ ಅದರ ಪರವಾನಿಗೆ ಕೇಳಿದರೆ ಝರಾಕ್ಸ ಪ್ರತಿ ಮಾತ್ರ ತೋರಿಸಿದ್ದು, ಮೂಲ ಪ್ರತಿ ಎಲಿದ್ದೆ ಎಂಬುವದು ನನಗೆ ನೆನಪಿರುವುದಿಲ್ಲ. ಈ ಝರಾಕ್ಸ ಪ್ರತಿಯನ್ನು ಪರಿಶೀಲಿಸಲು 2018 ಕ್ಕೆ ಅದರ ಪರವಾನಿಗೆ ಮುಗಿದಿರುತ್ತದೆ. ಸದರಿ ಪರವಾನಿಗೆ ನವಿಕರಿಸದೆ ಅಕ್ರಮವಾಗಿ ಇಟ್ಟಿಕೊಂಡು ಲೈಸನ್ಸ್ ನಿಯಮಗಳನ್ನು ಉಲಂಘಟನೆ ಮಾಡಿರುವ ನಿಮಿತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. ಆತನು ಈ ರಿವಾಲ್ವರ್ ಜಮ್ಮು ಕಶ್ಮಿರ್‍ದಲ್ಲಿ ಪಡೆದುಕೊಂಡಿದ್ದು, ಆತನು ಮಾಜಿ ಸೈನಿಕನೋ ಅಥವಾ ಇಲ್ಲವೂ ಎಂಬುದನ್ನು ಪತ್ತೆ ಹಚ್ಚಬೇಕಿದೆ.

ಸದರಿ ಪ್ರಕರಣಗಳಲ್ಲಿ ಅಕ್ರಮವಾಗಿ ಯಾವುದೆ ಪರವಾನಿಗೆ ಇಲ್ಲದೆ ರಿವಾಲ್ವರ ಮತ್ತು ಪಿಸ್ತುಲ ಹೊಂದಿದ 2 ಪ್ರಕರಣವನ್ನು ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯ ಶ್ಲಾಘನೀಯ ವಾಗಿರುತ್ತದೆಂದು ಹರ್ಷಿಸಿ ಬಹುಮಾನ ವಿತರಿಸಲಾಗಿದೆ. ಎಂದು ಎಸ್.ಪಿ ಚನ್ನಬಸವಣ್ಣ ಇದೇ ವೇಳೆ ತಿಳಿಸಿದರು. ಡಿವೈಎಸ್‍ಪಿ ಕೆ.ಎಮ್.ಸತೀಶ ಹಾಗೂ ರೌಡಿ ನಿಗ್ರಹ ದಳದ ಅಧಿಕಾರಿ ಹಣಮರೆಡ್ಡೆಪ್ಪ ಪತ್ರಿಕಾಗೋಷ್ಟಿಯಲ್ಲಿದ್ದರು.