ಅಕ್ರಮ ಮೀನು ಹಿಡಿಯುತ್ತಿದ್ದವರ ಬಂಧನ

ಹನೂರು:ಮಾ:31: ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿ ಕಾವೇರಿ ನದಿಯಲ್ಲಿ ಮೀನು ಹಿಡಿಯು ತ್ತಿದ್ದವರನ್ನು ಅರಣ್ಯ ಇಲಾಖೆಯವರು ಬಂಧಿಸಿ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.
ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯ ಚಿಕ್ಕಲೂರು ಶಾಖೆಯ ಚಿಕ್ಕಲ್ಲೂರು ಗಸ್ತಿನ ಕಾವೇರಿ ನದಿ ತೀರದ ಎಣ್ಣೆ ಹೊಳೆ ಸಿ.ಪಿ.ಟಿ. 12 ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಗಸ್ತು ಮಾಡುವಾಗ ಅಕ್ರಮವಾಗಿ ಮೀನು ಹಿಡಿಯುತ್ತಿದ್ದವರನ್ನು ಬಂಧಿಸಿ, ಬಂಧಿತರಿಂದ ಮೀನು ಹಿಡಿಯಲು ಬಳಸುತ್ತಿದ್ದ ತೆಪ್ಪ ಮತ್ತು ಬಲೆ ಇನ್ನಿತರೆ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.
ಹನೂರು ಕ್ಷೇತ್ರ ವ್ಯಾಪ್ತಿಯ ಶಿಲುವೆಪುರ-ಜಾಗೇರಿ ಗ್ರಾಮದ ಚಿನ್ನಪ್ಪ, ಅಮಲ್ ಅರ್ಪುದ ಜಯರಾಜ್, ಪೀಟರ್ ಪೆರಿಯ ನಾಯಗಂ, ಸ್ಪ್ಯಾನ್ಲಿ ಜಾನ್‍ಬೋಸ್ಕೋ, ಅರುಳ್ ರಾಜ್, ಪರಿಯನಾಯಗಂ, ಜ್ಯೋತಿಪ್ರೀಯ, ಸುನಿತ ಬಂಧಿತ ಆರೋಪಿಗಳು.
ಡಿಎಫ್‍ಒ ಡಾ.ರಮೇಶ್ ಹಾಗೂ ಎಸಿಎಫ್ ಅಂಕರಾಜು ಮಾರ್ಗದರ್ಶನದಲ್ಲಿ ಪ್ರಭಾರ ವಲಯ ಅರಣ್ಯಾಧಿಕಾರಿ ಪ್ರವಿಣ್‍ಕುಮಾರ್ ಉಪ ವಲಯ ಅರಣ್ಯಾಧಿಕಾರಿ ಸುನಿಲ್, ಸಿಬ್ಬಂದಿಗಳಾದ ರಾಕೇಶ್ ಸೀಮಗ್ ಹಜೇರಿ, ಪುಂಡಲೀಕ ಕಂಟೇಕಾರ, ಆನಂದ ಕುರಗುಂದ, ಅನಿಲ್ ವಾಲೀಕಾರ, ಚಳ್ಳಕೆರೆ ಮಹೇಶ ಅನಿಲ್ ಪಡಸೇಟ್ಟಿ, ಅಪೂರ್ವ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.