ಅಕ್ರಮ ಮೀನುಗಾರಿಕೆ ೨೦ ಮಂದಿ ಬಂಧನ

ರಾಮೇಶ್ವರಂ,ಮಾ.೨೫- ಶ್ರೀಲಂಕಾ ವ್ಯಾಪ್ತಿಗೆ ಸೇರಿದ ಗಡಿಯಲ್ಲಿ ಅಕ್ರಮ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ೨೦ ಮಂದಿ ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ೨ ದೋಣಿಗಳನ್ನು ಜಪ್ತಿ ಮಾಡಲಾಗಿದೆ.
ರಾಮೇಶ್ವರ ಮತ್ತು ತಂಗಚ್ಚಿಮಡಂ ಪ್ರದೇಶಕ್ಕೆ ಸೇರಿದ ಮೀನುಗಾರರು ಶ್ರೀಲಂಕಾಗೆ ಸೇರಿದ ಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾಗ ಶ್ರೀಲಂಕಾ ನೌಕಾಪಡೆ ಕಾರ್ಯಾಚರಣೆ ನಡೆಸಿ
ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ವಶಕ್ಕೆ ಪಡೆದಿರುವ ಮೀನುಗಾರರನ್ನು ಸ್ಥಳೀಯ ನೌಕಾ ಕೇಂದ್ರಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಬಳಿಕ ಶ್ರೀಲಂಕಾ ಮೀನುಗಾರರ ಪ್ರಾಧಿಕಾರಕ್ಕೆ ಹಸ್ತಾಂತರಿಸಿದ್ದಾರೆ.
ಮೀನುಗಾರರ ಬಂಧನಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮೀನುಗಾರರ ಸಂಘದ ಮುಖಂಡರು ಅವರ ಬಿಡುಗಡೆಗೆ ಕ್ರಮಕೈಗೊಳ್ಳಬೇಕೆಂದು ಕೇಂದ್ರ ಹಾಗೂ ರಾಜ್ಯಸರ್ಕಾರವನ್ನು ಒತ್ತಾಯಿಸಿದೆ.