ಅಕ್ರಮ ಮಾವಾ ಮಾರಾಟಕ್ಕೆ ಬಿಸಿ : ಇಬ್ಬರ ಬಂಧನ

ಅಥಣಿ :ಫೆ.21: ಪಟ್ಟಣದ ಹೊರವಲಯದಲ್ಲಿ ಅಕ್ರಮ ಗುಟ್ಕಾ ಮತ್ತು ಮಾವಾ ತಯಾರಿಕೆಗೆ ಬಳಸುವ ಅಡಿಕೆ ಚೂರು ಮತ್ತು ತಂಬಾಕು ಮಾರಾಟ ಮಾಡುತ್ತಿದ್ದ ಜಾಲವನ್ನು ಖಚಿತ ಮಾಹಿತಿ ಮೇರೆಗೆ ಅಥಣಿ ಸಿಪಿಐ ರವೀಂದ್ರ ನಾಯ್ಕೋಡಿ ಹಾಗೂ ಅವರ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸವದತ್ತಿ ತಾಲೂಕಿನ ಯರಗಟ್ಟಿಯ ಶಾನೂರ ರಮಜಾನ ಬಿರಡಿ ಮತ್ತು ಜಮಖಂಡಿ ತಾಲೂಕಿನ ಮೆಹಬೂಬ ಪಠಾಣ ಬಂಧಿತ ಆರೋಪಿಗಳಾಗಿದ್ದು. ಇವರು ಜಮಖಂಡಿ ತಾಲೂಕಿನ ರಬಕವಿ ಮತ್ತು ಬನಹಟ್ಟಿ ಮಾರ್ಗವಾಗಿ ಬಹುದಿನಗಳಿಂದ ಅಂತರ್ ಜಿಲ್ಲಾ ಮಟ್ಟದಲ್ಲಿ ಅಕ್ರಮವಾಗಿ ಮಾವಾ ಮಾರಾಟ ಮಾಡುತ್ತಿದ್ದರು. ಬಂಧಿತರಿಂದ ಅಡಿಕೆ ಚೂರು ಮತ್ತು ತಂಬಾಕು ಮಿಶ್ರಿತ ಮಾವ ಹಾಗೂ ಕಚ್ಚಾ ಗುಟುಕಾ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದು ಅಂದಾಜು ಮೌಲ್ಯ 33 ಸಾವಿರದ, 600 ರೂಪಾಯಿ ಮೌಲ್ಯದ ಮಾವಾ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ
ಒಂದು ಬೊಲೆರೋ ವಾಹನ ಸಮೇತ ಅಥಣಿ ಪಟ್ಟಣದ ಅಬ್ಬಿಹಾಳ ಸರ್ಕಲ್ ನಲ್ಲಿ ಮಾರಾಟ ಮಾಡುವ ವೇಳೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು ಅಥಣಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದಲ್ಲಿ ಗುಟ್ಕಾ ನಿಷೇಧ ಕಾಯ್ದೆ ಜಾರಿಯಲ್ಲಿ ಇದ್ದರೂ ಕೂಡ ಅಕ್ರಮವಾಗಿ ಗುಟ್ಕಾ ಮತ್ತು ಮಾವಾ ತಯಾರಿಕೆ ಮತ್ತು ಅಕ್ರಮ ಸಾಗಾಟ ಮತ್ತು ಮಾರಾಟ ಸದ್ದಿಲ್ಲದೆ ನಡೆಯುತ್ತಿದೆ.

ಬೆಳಗಾವಿ ಎಸ್ ಪಿ ಡಾ. ಸಂಜೀವ ಪಾಟೀಲ ಹಾಗೂ ಅಥಣಿ ಡಿವೈ ಎಸ್ ಪಿ ಶ್ರೀಪಾದ ಜಲ್ದೆ ಅವರ ಮಾರ್ಗದರ್ಶನದಲ್ಲಿ ಅಥಣಿ ಸಿಪಿಐ ರವಿಂದ್ರ ನಾಯ್ಕೋಡಿ ಇವರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದು ಅಥಣಿ ಪೆÇೀಲಿಸರು ಪ್ರಕರಣ ದಾಖಲಿಸಿದ್ದಾರೆ. ಈ ವೇಳೆ ಎ ಎಸ್ ಐ ವೈ. ವೈ ರಾಮೋಜಿ, ಹಾಗೂ ಪೆÇೀಲಿಸ್ ಸಿಬ್ಬಂದಿಗಳಾದ ಮಹೇಶ ದೊಡ್ಡಮನಿ, ಎ. ಇ ಈರಕರ, ಪಿ. ಎನ್ ಕುರಿ ಭಾಗಿಯಾಗಿದ್ದರು.