ಅಕ್ರಮ ಮಾವಾ ತಯಾರಿಸುತ್ತಿದ್ದ ಮೂವರು ಆರೋಪಿಗಳ ಬಂಧನ

ವಿಜಯಪುರ, ಜೂ.2-ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಮಾವಾ ತಯಾರಿಸುತ್ತಿದ್ದ ಮೂವರು ಆರೋಪಿತರನ್ನು ತಿಕೋಟಾ ಪೋಲಿಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮದರಸಾಬ ತಂದೆ ಹಾಜಿಲಾಲ ಮಡ್ಡಿಮನಿ (48) ಸಾ. ತಿಕೋಟಾ, ಅಬ್ದೂಲ್‍ಕರಿಂ ತಂದೆ ಸಾಯಿಹುಸೇನ್ ಬಡಕಲ್ (48) ಸಾ. ತಿಕೋಟಾ
ಮುಬಾರಕ ತಂದೆ ಗೌಸ್‍ಪಾಕ ಬಡಕಲ್ (22)ಸಾ. ತಿಕೋಟಾ ಇವರುಗಳನ್ನು ಬಂಧಿಸಿ ಅವರಿಂದ ಮಾವಾ 5 ಕೆಜಿ ಅಂದಾಜು ಕಿಮ್ಮತ್ತು 10,000 ರೂ, ಮಾವಾ ತಯಾರಿಸಲು ಉಪಯೋಗಿಸುವ ಅಡಿಕೆ ಕಚ್ಚಾ ತಂಬಾಕು ಹಿಗೇ ಒಟ್ಟು 185 ಕೆಜಿ ಒಟ್ಟು ಅಂದಾಜು ಬೆಲೆ 2,50,000-00 ರೂ. ಗಳು ಹಾಗೂ ಮಾವಾ ತಯಾರಿಸಲು ಬಳಸುವ ಮಿಕ್ಸರ ಮಶೀನಗಳು 02 ಮತ್ತು ರಬ್ಬರ್ ಪ್ಯಾಕೇಟಗಳು ಹಾಗೂ ಇತರೆ ವಸ್ತುಗಳು ಅಂದಾಜು ಕಿಮ್ಮತ್ತು 25000 ರೂ. ಗಳು ಹೀಗೆ ಒಟ್ಟು 2,85,000 ರೂ ಕಿಮ್ಮತ್ತಿನ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಕೋವಿಡ್-19 ಲಾಕಡೌನ ಪ್ರಯುಕ್ತ ತಿಕೋಟಾ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಸ್.ಬಿ.ಪಾಲಭಾವಿ, ಸಿಪಿಐ ವಿಜಯಪುರ ಗ್ರಾಮೀಣ ವೃತ್ತ ರವರು ಪೆಟ್ರೋಲಿಂಗ್ ಮಾಡುತ್ತಿದ್ದಾಗ, ತಿಕೋಟಾ ಗ್ರಾಮದ ಬಡಕಲ್ಲ ಓಣಿ ಹಾಗೂ ಗೌಡರ ಓಣಿಯಲ್ಲಿ ಅನಧೀಕೃತವಾಗಿ ಉಪಯೋಗಿಸಲು ಅರ್ಹವಲ್ಲದ ಆರೋಗ್ಯಕ್ಕೆ ಹಾನಿಕಾರಕ ಪದಾರ್ಥಗಳನ್ನು ಒಳಗೊಂಡ ವಸ್ತುಗಳನ್ನು ಉಪಯೋಗಿಸಿ ಮಾವಾ ತಯಾರಿಸುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದಿದ್ದು, ಈ ವಿಷಯವನ್ನು ಅನುಪಮ್ ಅಗ್ರವಾಲ್, ಪೊಲೀಸ್ ಅಧೀಕ್ಷಕರು, ವಿಜಯಪುರ, ಡಾ. ಆರ್. ಎಲ್.ಅರಸಿದ್ದಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ವಿಜಯಪುರ, ಕೆ.ಸಿ.ಲಕ್ಷ್ಮೀನಾರಾಯಣ ಡಿಎಸ್‍ಪಿ ವಿಜಯಪುರರವರುಗಳಿಗೆ ತಿಳಿಸಿ ಅವರ ಮಾರ್ಗದರ್ಶನದಲ್ಲಿ ಎಸ್.ಬಿ.ಪಾಲಭಾವಿ, ಸಿಪಿಐ ವಿಜಯಪುರ ಗ್ರಾಮೀಣ ವೃತ್ತ ರವರ ನೇತೃತ್ವದಲ್ಲಿ ಶ್ರೀಮತಿ ಎಸ್.ಕೆ.ಲಂಗೂಟಿ, ಮಪಿಎಸ್‍ಐ ತಿಕೋಟಾ ಪಿಎಸ್ ಹಾಗೂ ಸಿಬ್ಬಂದಿಯವರಾದ ಎಲ್.ಎಸ್.ಹೀರೆಗೌಡರ, ಆರ್.ಡಿ.ಅಂಜುಟಗಿ, ಎಸ್ ಬಿ ಶಿವೂರ, ಸಲಿಂ ಸವದಿ, ಪಿ. ಸಿ. ದಳವಾಯಿ, ಆಯ್ ವಾಯ್ ದಳವಾಯಿ ಒಳಗೊಂಡ ತಂಡದೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ದಾಳಿ ಮಾಡಿದ್ದರು.
ಈ ಕುರಿತು ತಿಕೋಟಾ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
ಈ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ತಂಡದ ಕಾರ್ಯಾಚರಣೆಯನ್ನು ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ ಅವರು ಶ್ಲಾಘಿಸಿದ್ದಾರೆ.