ಅಕ್ರಮ ಮರ ಕಡಿತ ಪ್ರಕರಣ: ನಾಲ್ವರ ಸೆರೆ

ಕೊಕ್ಕಡ, ಜು.೨೦- ಶಿಬಾಜೆ ರಕ್ಷಿತಾರಣ್ಯದ ಕಜೆ ಎಂಬಲ್ಲಿ ಅಕ್ರಮವಾಗಿ ಮತ್ತಿ (ಬಣ್ಪು) ಮತ್ತು ಹೆಬ್ಬಲಸು ಮರ ಕಡಿತದ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಶಿಬಾಜೆ ಗ್ರಾಮದ ಕಜೆ ನಿವಾಸಿ ದಿನೇಶ್ (51) ಹಾಗೂ ಕಳೆಂಜ ಗ್ರಾಮದ ಕಾಯಡ ನಿವಾಸಿ ಜಿತೇಂದ್ರ (25)‌ ಇವರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿದ್ದ ಶಿಬಾಜೆಯ ಉಮೇಶ್ (35), ರೆಖ್ಯದ ವಿಜಯ್‌ (45) ಎಂಬವರನ್ನು ಸೋಮವಾರ ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ತಡ್ಲಗಿ ಹಾಗೂ ಅರಣ್ಯ ರಕ್ಷಕ ನಿಂಗಪ್ಪ ಅವಾರಿ, ಪ್ರಶಾಂತ್ ಮಾಳಗಿ, ರಸೂಲ್, ಸುನಿಲ್ ನಾಯಕ್, ಅರಣ್ಯ ವೀಕ್ಷಕ ದಾಮೋದರ್, ವಾಹನ ಚಾಲಕ ಕಿಶೋರ್ ಭಾಗಿಯಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಉಪ್ಪಿನಂಗಡಿ ವಲಯಾರಣ್ಯಾಧಿಕಾರಿ ಎದುರು ಹಾಜರುಪಡಿಸಲಾಗಿದ್ದು, ಸ್ಥಳದ ಮಹಜರು ನಡೆಸಿ ವಲಯಾರಣ್ಯಾಧಿಕಾರಿ ಮಧುಸೂದನ್ ಮತ್ತು ಸಿಬ್ಬಂದಿ ವರ್ಗ ಕಡಿತಕ್ಕೆ ಸಂಬಂಧಿಸಿದ ಸೊತ್ತುಗಳನ್ನು, ಮರ ಕೊಯ್ಯುವ ಒಂದು ಯಂತ್ರ, ಕತ್ತಿ, ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.