ಅಕ್ರಮ ಮರಳು ಸಾಗಿಸುತ್ತಿದ್ದ ಟಿಪ್ಪರ್ ವಶಃ ಚಾಲಕ ಪರಾರಿ

ವಿಜಯಪುರ, ಮೇ.29-ಜಿಲ್ಲೆಯ ತಾಳಿಕೋಟೆ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಮೇಲೆ ದಾಳಿ ನಡೆಸಿರುವ ಕಂದಾಯ-ಪೆÇಲೀಸರ ತಂಡ 25 ಸಾವಿರ ರೂ. ಮೌಲ್ಯದ 7 ಬ್ರಾಸ್ ಮರಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣ ಮಾರ್ಗವಾಗಿ ವಿಜಯಪುರ ಜಿಲ್ಲೆಯ ತಾಳಿಕೋಟೆ ಕಡೆಗೆ ಅಕ್ರಮವಾಗಿ ಮರಳು ತುಂಬಿದ ಟಿಪ್ಪರ್ ಬರುವ ಕುರಿತು ಕಂದಾಯ ಅಧಿಕಾರಿಗಳಿಗೆ ನಿಖರ ಮಾಹಿತಿ ಸಿಕ್ಕಿತ್ತು.
ಇದನ್ನು ಆಧರಿಸಿ ಪೆÇಲೀಸರ ನೆರವಿನೊಂದಿಗೆ ಟಿಪ್ಪರ್ ಬರುವ ಮಾರ್ಗದಲ್ಲಿ ಕಾಯ್ದು ಕುಳಿತು, ಟಿಪ್ಪರ ಬರುತ್ತಲೇ ಕೈ ಮಾಡಿ ದಾಳಿ ನಡೆಸಿದರು.
ಈ ಹಂತದಲ್ಲಿ ದೂರದಲ್ಲಿ ಟಿಪ್ಪರ್ ನಿಲ್ಲಿಸಿದ ಚಾಲಕ ಪರಾರಿಯಾಗಿದ್ದು, ಅಕ್ರಮ ಮರಳನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ತಾಳಿಕೋಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.