ಅಕ್ರಮ ಮರಳು ಸಾಗಾಣಿಕೆ ಪರವಾನಿಗೆ ರದ್ದಿತಿಗೆ ಆಗ್ರಹ

ರಾಯಚೂರು,.ಮಾ.೫-ಮಸ್ಕಿ ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿರುವ ವಿರುದ್ಧ ಕ್ರಮ ಕೈಗೊಂಡು ಮರಳು ಪಾಯಿಂಟ್ ಪರವಾನಿಗೆ ರದ್ದು ಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಮಸ್ಕಿ ತಾಲೂಕಿನ ಜಾಲವಾಡಿ, ಬುದ್ದಿನ್ನಿ, ಜೋಗಳದಿನ್ನಿ, ಗ್ರಾಮಗಳಲ್ಲಿ ಮಂಜೂರು ಆಗಿರುವ ಮರಳು ಗುತ್ತಿಗೆ ಪ್ರದೇಶವನ್ನು ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಗುತ್ತಿಗೆದಾರರು ಅಕ್ರಮ ಮರಳು ಸಾಗಾಣಿಕೆ ಮತ್ತು ಸರಕಾರದ ಗುತ್ತಿಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘನೆ ಮಾಡಿರುವ ನಾಲ್ಕು ಮರಳು ಪಾಯಿಂಟ್ ಪರವಾನಿಗೆ ರದ್ದುಗೊಳಿಸಬೇಕೆಂದು ಆಗ್ರಹಿಸಿದರು. ಅಕ್ರಮ ಮರಳು ಸಾಗಾಣಿಕ ಬಳಗಾನೂರು ಕಂದಾಯ ವ್ಯಾಪ್ತಿಯ ಬುದ್ದಿನ್ನಿ ಪಟ್ಟಾ ಭೂಮಿ ಮರಳು ಸ್ಟಾಕ್ ಯಾರ್ಡ್ ಲಿಸ್
ಗುತ್ತಿಗೆದಾರರು ಶ ಜಿ.ಮಹೇಶಕುಮಾರ ಹಾಗೂ ಜಾಲವಾಡಗಿ ಪಟ್ಟಾ ಭೂಮಿ ಮರಳು ಸ್ಟಾಕ್ ಯಾರ್ಡ್ ಗುತ್ತಿಗೆದಾರರು ವೆಂಕಟೇಶ್ವರ ಮಿನರಲ್ಸ್ ಜಾಲವಾಡಿಗಿ ಹಾಗೂ ಸ್ಟಾಕ್ ಯಾರ್ಡನಿಂದ ಅತಿ ಹೆಚ್ಚು ಅಕ್ರಮ ಮರಳು ಸಾಗಾಣಿಕೆಯಾಗುತ್ತಿದೆ.
ಕಾನೂನು ಗಾಳಿಗೆ ತೂರಿ ಮಸ್ಕಿ ತಾಲೂಕಿನಲ್ಲಿ ಎಗ್ಗಿಲ್ಲದೇ ಮರಳು ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು.ಇಲ್ಲಿ ಸ್ಟಾಕ್ ಯಾರ್ಡನ ಗುತ್ತಿಗೆದಾರರು ಅಕ್ರಮ ಮರಳು ಸಾಗಾಣಿಕ ಮಾಡುವ ದಂದೆಕೋರರ ಜೊತೆಯಾಗಿ ಸರಕಾರದ ಬೊಕ್ಕಸಕ್ಕೆ ಭಾರಿ ನಷ್ಟವನ್ನು ಮಾಡುತ್ತಿದ್ದಾರೆ. ಈ ಜಾಲವಾಡಗಿ ಸ್ಟಾಕ್ ಯಾರ್ಡನಿಂದ ಒಂದೇ ರಾಯಲ್ಟಿಯಲ್ಲಿ ೪ ರಿಂದ ೫ ಟ್ರಿಪ್ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ.
ಕೂಡಲೇ ಪರವಾನಿಗೆ ರದ್ದು ಮಾಡಬೇಕು ಇಲ್ಲವಾದಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದುರುಗರಾಜ್ ಸೇರಿದಂತೆ ಉಪಸ್ಥಿತರಿದ್ದರು.