ಅಕ್ರಮ ಮರಳು ಸಾಗಾಣಿಕೆ ತಡೆಹಿಡಿಯುವಂತೆ ಶ್ರೀರಾಮ ಸೇನೆ ಕರ್ನಾಟಕ ಆಗ್ರಹ

ಸಿರವಾರ.ಜ.೧೨- ಸಿರವಾರ ಮಾರ್ಗವಾಗಿ ನಿತ್ಯ ಟ್ರಾಕ್ಟರ್ ಹಾಗೂ ಲಾರಿಗಳ ಮೂಲಕ ರಾಜಧನ ಪಾವತಿ ಮಾಡದೆ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಯುತ್ತಿದೆ, ತಡೆಯುವಂತೆ ಶ್ರೀರಾಮ ಸೇನೆ ಕರ್ನಾಟಕ ಸಂಘಟನೆಯಿಂದ ತಹಸೀಲ್ದಾರ ನೀಡಿದ ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ತಹಸೀಲ್ದಾರರಿಗೆ ನೀಡಿದ ಮನವಿ ಪತ್ರದಲ್ಲಿ ಜಿಲ್ಲೆ, ತಾಲೂಕ ಕೇಂದ್ರಗಳಲಿ ರಾಜಾರೋಷವಾಗಿ ಅಕ್ರಮ ಮರಳು ಸಾಗಾಣಿಕೆ ಕಾರ್ಯನಡೆಯುತ್ತಿದೆ. ರಾತ್ರಿ ವೇಳೆ ಬಿಡಿ ಹಗಲು ವೇಳೆಯಲ್ಲಿ ಠಾಣೆಯ ಮುಂಭಾಗದಿಂದ ರಾಜಧನ ಪಾವತಿ ಮಾಡದೆ ಮರಳು ಸಾಗಾಣಿಕೆ ನಡೆಯುತ್ತಿದೆ. ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಮರಳು ಶೇಖರಣೆ ಮಾಡಿ ನಂತರ ಟ್ರ್ಯಾಕ್ಟರ್ ಮೂಲಕ ಗ್ರಾಹಕರಿಗೆ ಮರಳು ಮಾರಾಟ ಮಾಡಲಾಗುತ್ತಿದ್ದೂ ಈ ಎಲ್ಲಾ ಅಕ್ರಮ ಚಟುವಟಿಗೆ ಠಾಣೆಯ ಪಿಎಸ್‌ಎಸ್‌ಐ ತಿಳಿದಿದ್ದರೂ ಅವರು ಕ್ರಮಗಕೈಗೊಳದೆ ನಿರ್ಲಕ್ಯ ವಹಿಸುತ್ತಿದ್ದಾರೆ.
ಕೂಡಲೇ ಅಕ್ರಮ ಮರಳು ಮಾರಾಟಕ್ಕೆ ಕಡಿವಾಣ ಹಾಕಬೇಕು ಇಲ್ಲ ಮುಂದಿನ ದಿನಗಳಲ್ಲಿ ಉಗ್ರ ರೀತಿಯ ಹೊರಾಟಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಶ್ರೀರಾಮ ಸೇನೆಯ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ನಾಯಕ, ತಾಲೂಕ ಅದ್ಯಕ್ಷ ಅಂಬಣ್ಣ ನಾಯಕ,ಶಿವರಾಜ, ಬಸವರಾಜ ನವಲಕಲ್, ವಾಸುದೇವ ನಾಯಕ, ಮುಕ್ಕಣ್ಣ ನಾಯಕ, ಸಿದ್ದಲಿಂಗನಾಯಕ, ಸೂರಪ್ಪ ನಾಯಾಕ, ವಿಜಯ ಪೂಜಾರಿ, ಸುರೇಶ ವೆಂಕಯ್ಯ ನಾಯುಡು ಸೇರಿದಂತೆ ಇನ್ನಿತರರು ಇದ್ದರು.