ಅಕ್ರಮ ಮರಳು ಸಾಗಾಟ ಕಡಿವಾಣಕ್ಕೆ ಆಗ್ರಹ

ಲಿಂಗಸುಗೂರ.ಏ.೨೭-ದೇವದುರ್ಗ ತಾಲೂಕಿನ ಕೃಷ್ಣಾ ನದಿಯ ಅಕ್ರಮ ಮರಳು ನಿತ್ಯ ಲಾರಿ ಟಿಪ್ಪರ ಮೂಲಕ ಸಾಗಣೆಯಾಗುತ್ತಿದ್ದು ಅಕ್ರಮ ಮರಳನ್ನು ತಾಲೂಕಿನ ರೋಡಲಬಂಡಾ ಕ್ಯಾಂಪ ಹತ್ತಿರದ ನಾರಾಯಣಪೂರ ಜಲಾಶಯ ಪಕ್ಕದ ಅರಣ್ಯ ಇಲಾಖೆಯ ಜಾಗೆಯಲ್ಲಿ ಅಪಾರ ಪ್ರಮಾಣದಲ್ಲಿ ಸಂಗ್ರಹಿಸುತ್ತಿದ್ದು ಸದರಿ ಅಕ್ರಮ ಮರಳು ಸಾಗಣೆಕೆ ಪೊಲೀಸ ಅರಣ್ಯ ಕಂದಾಯ ಇಲಾಖೆ ಕುಮ್ಮುಕ್ಕ ಇದ್ದು ಸಂಗ್ರಹಿಸಿದ ಅಕ್ರಮ ಮರಳನ್ನು ಅಧಿಕಾರಿಗಳ ಸಹಾಯದಿಂದ ಯಾದಗಿರ ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿದ್ದು ಕಾರಣ ಕೂಡಲೆ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿ ಸಂಬಂದಿಸಿದ ಪೊಲೀಸ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಕಾನೂನು ಕ್ರಮಜರುಗಿಸಲು ಲಿಂಗಸುಗೂರ ತಾಲೂಕು ದಲಿತ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಯಂಕಪ್ಪ ಚಿತ್ತಾಪೂರ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ ಮಹಾನಿರ್ದೆಶಕರಿಗೆ ದೂರುಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.