ಅಕ್ರಮ ಮರಳು ಶೇಖರಣೆ : ತಹಸೀಲ್ದಾರ್ ದಾಳಿ

ಕೊಟ್ಟೂರು ಮೇ 01: ತಾಲೂಕಿನ ಮಂಗನಹಳ್ಳಿ ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಪರವಾನಿಗೆ ಇಲ್ಲದೇ 3 ಕಡೆ ಸಂಗ್ರಹಿಸಿದ್ದ ಸುಮಾರು 55 ಟ್ರಾಕ್ಟರ್ ಮರಳನ್ನು ಜಪ್ತಿಮಾಡಿ ಮುಂದಿನ ಕ್ರಮಕ್ಕಾಗಿ ಲೋಕೋಪಯೋಗಿ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ.
ಖಚಿತ ಮಾಹಿತಿ ಆಧರಿಸಿ ಮಂಗನಹಳ್ಳಿ ಗ್ರಾಮಕ್ಕೆ ಭೇಟಿನೀಡಲಾಗಿ ಮಂಜುನಾಥ ಇವರ ಖಣದಲ್ಲಿ ಸಾವಜ್ಜಿ ಬಸವರಾಜ ಇವರು ಸುಮಾರು 35 ಟ್ರಾಕ್ಟರ್, ಐನಳ್ಳಿ ಕೊಟ್ರೇಶಪ್ಪ ಇವರು 16 ಟ್ರಾಕ್ಟರ್ ಮರಳನ್ನು ಸಂಗ್ರಹಿಸಿದ್ದು ಕಂಡುಬಂದಿದ್ದು, ವಿಚಾರಿಸಲಾಗಿ ಯಾವುದೇ ರೀತಿಯ ಪರವಾನಿಗೆಯನ್ನು ಪಡೆದಿರುವುದಿಲ್ಲ. ಆದ್ದರಿಂದ ಸದರಿ 55 ಟ್ರಾಕ್ಟರ್ ಮರಳನ್ನು ಜಪ್ತಿ ಮಾಡಿ ಲೋಕೋಪಯೋಗಿ ಇಲಾಖೆಯ ವಶಕ್ಕೆ ಮುಂದಿನ ಕ್ರಮಕ್ಕಾಗಿ ಒಪ್ಪಿಸಲಾಗಿದೆ. ಈ ಸಮಯದಲ್ಲಿ ಪಿಎಸ್ಐ ನಾಗಪ್ಪ, ಕಂದಾಯ ನಿರೀಕ್ಷಕ ಹಾಲಸ್ವಾಮಿ, ಗ್ರಾಮ ಲೆಕ್ಕಿಗರಾದ ಕೊಟ್ರಮ್ಮ ವೈಎಂ, ಪೊಲೀಸ್ ಕಾನ್ಸಟೇಬಲ್ ಕಂದಗಲ್ ಕೊಟ್ರಗೌಡ, ಹೊಸಕೊಡಿಹಳ್ಳಿರಮೇಶ ಇದ್ದರು.