ಅಕ್ರಮ ಮರಳು ಮಾರಾಟ ಕುಳಗಳ ಮೇಲೆ ಕಠಿಣ ಕ್ರಮ : ತಹಶೀಲ್ದಾರ

ತಾಳಿಕೋಟಿ: ತಾಲೂಕಿನಾದ್ಯಾಂತ ಹಲವಾರ ದಿನಗಳಿಂದ ನಡೆಯುತ್ತಿರುವ ಅಕ್ರಮ ಮರಳು ಮಾರಟ ದಂದೆಯನ್ನು ನಿಯಂತ್ರಿಸಿ ಇದರಲ್ಲಿ ನಿರತರವಾಗಿರುವ ವ್ಯಕ್ತಿಗಳ ಮೇಲೆ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದೆಂದು ತಾಳಿಕೋಟಿ ತಹಶೀಲ್ದಾರ ಅನಿಲಕುಮಾರ ಡವಳಗಿ ತಿಳಿಸಿದರು.

ಇತ್ತಿಚ್ಚೀಗೆ ಪಟ್ಟಣದಲ್ಲಿ ಈ ಅಕ್ರಮ ದಂದೆಯಲ್ಲಿ ಒಂದು ವ್ಯವಸ್ಥಿತ ಗುಂಪು ಕಾರ್ಯನಿರತವಾಗಿದ್ದು, ಪ್ರತಿದಿನ ಲಕ್ಷ ಗಟ್ಟಲೆ ಮರಳು ಅಕ್ರಮವಾಗಿ ಕೆಲವು ಸ್ಥಳಗಳಲ್ಲಿ ಸಂಗ್ರಹಿಸಿ ಮಾರಾಟ ಮಾಡುತಿದ್ದು ಇದನ್ನು ನಿಯಂತ್ರಿಸಿ ಇದರಲ್ಲಿ ಬಾಗಿಯಾಗಿರುವ ಮಾಫಿಯಾಗಳನ್ನು ಕಾನೂನಿನ ಕ್ರಮ ಜರಗಿಸಬೇಕೆಂದು ಕೇಲವು ಸುದ್ದೀವಾಹಿನಯ ವರದಿಗಾರರು ವಿಶೇಷ ಸುದ್ದಿಯ ಮೂಲಕ ಗಮನ ಸಳೆದಿರುವ ಕಾರಣ ತಾಲೂಕು
ಆಡಳಿತ ಎಚ್ಚತ್ತುಗೊಂಡಿದೆ. ಈ ಅಕ್ರಮ ಮರಳಿಗೆ ಸಂಬಂಧಿಸಿದ ಸ್ಥಳಿಯ ತಹಶೀಲ್ದಾರ ಅನೀಲಕುಮಾರ ಡವಳಗಿ ಹಾಗೂ ಪೋಲಿಸ್ ಠಾಣೆ ಪಿ.ಎಸ್.ಐ. ಶಿವಾಜಿ ಪವಾರ ಅವರು ಮರಳು ಸಂಗ್ರಹ ಸ್ಥಳಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬೇಟಿಯ ಸಂದರ್ಭ ಅಕ್ರಮ ಮರಳು ಸಂಗ್ರಹವಾಗದಿರುವುದು ಕಂಡುಬಂದಿಲ್ಲ. ಮುಂದಿನ ದಿನ ಮಾನಗಳಲ್ಲಿ ಕಂಡು ಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದಿನಾಂಕ
08-09-2020 ರಂದು ಅಕ್ರಮ ಮರಳು ಸಂಗ್ರಹ ವರದಿ ಪ್ರಕಟಿಸಿದ್ದು ದಾಖಲೆ ಇರುತ್ತದೆ. ತಮ್ಮ ಗಮನಕ್ಕೆ ಬಂದಿದ್ದರು ಸಹ ಇಲ್ಲಿಯರೆಗೆ ಯಾವುದೇ ಕ್ರಮ ಏಕೆ ಜರುಗಿಸಿಲ್ಲ ಎಂದು ಪ್ರಶ್ನೆಸಿದರು? ಇದಕ್ಕೆ ಸಮಜಾಯಿಸಿ ನೀಡಲು ತಹಶೀಲ್ದಾರರು ಪ್ರಯತ್ನಿಸಿದರು. ಮುಂದೆ ಈ ಕುರಿತು ಕಠಿಣ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.

ಇಡಿ ಪ್ರಕರಣವನ್ನು ಗಮನಿಸಿದಾಗ ಕಳ್ಳಾಟ ಯಾವ ರೀತಿ ನಡೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಯಾವುದೇ ಕಾನೂನ ಬಾಹೀರ ವ್ಯವಹಾರಗಳು ನಡೆಯಬೇಕಾದರೆ ಅದಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಸಹಕಾರ ಬೇಕೆಬೇಕು ಇಲ್ಲದಿದ್ದರೆ ಅದು ನಡೆಯುವುದು ಅಸಾಧ್ಯ. ಅದು ಏನಿದ್ದರೂ ಇಲಾಖೆಯ ಮೂಗಿನ ನೇರದಲ್ಲಿಯೇ ನಡೆಯಬೇಕು. ಹೀಗಿದ್ದರೂ ಸಹ ಜವಾಬ್ದಾರಿಯುತ ಅಧಿಕಾರಿಗಳು ನುಣಚಿಕೊಳ್ಳುವುದು ಎಷ್ಟೂ ಸರಿ? ಎಂಬುವದು ಮೂಲ ಪ್ರಶ್ನೆಯಾಗಿದೆ.

ಈ ಅಡ್ಡ ದಂದೆ ಯಾವದೇ ಪರಿಸ್ಥಿಯಲ್ಲಿ ನಿಲ್ಲಬೇಕೆಂದು ಹಲವು ಮಾದ್ಯಮ ವರದಿಗಾರರು ತೊಡೆ ತಟ್ಟಿ ತಮ್ಮ ಪತ್ರಿಕಾ ಧರ್ಮವನ್ನು ನಿಭಾಯಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.

ಭವಿಷ್ಯದಲ್ಲಿ ಈ ಕಳ್ಳಾಟ ಮುಂದುವರಿಯುದು ಅಸಾಧ್ಯ ಎಂದು ಹೇಳುವುದು ಕಷ್ಟ ಸಾಧ್ಯವಾದರೂ ಒಂದಂತೂ ನಿಜ ಇನ್ನು ಮುಂದೆ ಈ ಅಡ್ಡದಂದೆ ಅಷ್ಟು ಸುಲಭವಾಗಿ ನಡೆಯುವುದಿಲ್ಲ. ಇದಕ್ಕೊಂದು ತಾರ್ಕಿಕ ಅಂತ್ಯ ಸಿಕ್ಕೆ ಲಸಿಗಲಿದೆ. ಇದರ ಜವಾಬ್ದಾರಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಮೇಲೆ ಇದೆ. ಅವರು ತಮ್ಮ ಕರ್ತವ್ಯ ಪ್ರಜ್ಞೆವನ್ನು ತೋರುವವರೇ? ಕಾದು ನೋಡಬೇಕಾಗಿದೆ.