ಅಕ್ರಮ ಮರಳು ದಂಧೆ ಅಡ್ಡೆ ಎಸ್ಪಿ ಹರಿಬಾಬು ದಾಳಿ


ಸಂಜೆವಾಣಿ ವಾರ್ತೆ
ಹೊಸಪೇಟೆ ನ22: ಅಕ್ರಮ ಮರಳು ದಂಧೆಯ ಅಡ್ಡೆ ಮೇಲೆ ಎಸ್ಪಿ ಶ್ರೀಹರಿಬಾಬು ಸೋಮವಾರ ದಾಳಿ ನಡೆಸಿ, 40 ಟನ್‍ಷ್ಟು ಮರಳು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿಯೊಂದಿಗೆ ನಗರದ ಹೊಸಪೇಟೆ ಹೊರವಲಯದ ಎಚ್.ಎಲ್.ಸಿ ಕಾಲೂವೆ ಪಕ್ಕದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ 40 ಟನ್ ಮರಳು, ಒಂದು ಟ್ರ್ಯಾಕ್ಟರ್ ಸೀಜ್ ಮಾಡಿದ್ದಾರೆ. ಮರಳು ಸಂಗ್ರಹಗಾರರಿಗೆ ದಂಡ ಹಾಕಿ ಕ್ರಮಕೈಗೊಂಡಿದ್ದಾರೆ. ಪೋಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿದರು