ಅಕ್ರಮ ಮರಳು ತಡೆಗಟ್ಟುವಲ್ಲಿ ಜಿಲ್ಲಾಡಳಿತ ವಿಫಲ

ದೇವಪ್ಪ ಹಂಚಿನಾಳ
ಗಬ್ಬೂರು. ಡಿ.೧೯- ರಕ್ತ ಬಿಜಾಸುರನಂತೆ ಹಬ್ಬುತ್ತಿರುವ ಈ ಮಾಹಾಮಾರಿ ಕೊರೋನಾ ರೋಗ ತಡೆಗಟ್ಟಲು ಸಂಪೂರ್ಣ ಘೋಷಣೆ ಮಾಡಿ ಸರಕಾರ ಆದೇಶ ಮಾಡಿದೆ.
ಆದರೆ, ಹೀರೆರಾಯಕುಂಪಿ ಮತ್ತು ಗೂಗಲ್‌ನಲ್ಲಿ ಅಕ್ರಮ ಮರಳು ದಂಧೆಕೋರರಿಗೆ ಯಾವುದೇ ನಿಯಮ ಅನ್ವಯಿಸದಂತೆ ಕಾಣುತ್ತಿಲ್ಲ. ದೇವದುರ್ಗ ತಾಲೂಕಿನ ಗಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ- ಹಗಲು ಎನ್ನದೆ ನಿರಂತರವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದರೂ ಸಹ ಪೊಲೀಸ್ ಅಧಿಕಾರಿಗಳು ಕಣ್ಣುಮುಚ್ಚಿಕುಳಿತುಕೊಂಡಿದ್ದಾರೆ. ಯಾವ ಇಲಾಖೆಯಲ್ಲಿ ರಾಜಸ್ವ ಪಾವತಿಸಿ ಮರಳು ಸಾಗಣಿಕೆಗೆ ನೀಡುತ್ತಾರೆ ಎಂದು ಸಾರ್ವಜನಿಕ ಸ್ಥಳಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಆದರೆ, ಗಬ್ಬೂರು ಸಮೀಪದ ಗೂಗಲ್‌ನಲ್ಲಿ ಮರಳು ತುಂಬಿದ ಟಿಪ್ಪರ ಸಾಗಿಸುತ್ತಿರುವ ದೃಶ್ಯ ಕಂಡುಬಂದಿದೆ. ಹೀರೆರಾಯಕುಂಪಿ ಮತ್ತು ಗೂಗಲ್‌ನಲ್ಲಿ ರಾಜರೋಷವಾಗಿ ಪೊಲೀಸರ ಕಣ್ಣು ಎದುರಿಗೆ ಮರಳು ಸಾಗಾಟ ಮಾಡುತ್ತಿದ್ದಾರೆ. ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಟ್ಯಾಕ್ಟರ್ ಮೂಲಕ ಅಕ್ರಮವಾಗಿ ಮರಳು ಸಾಗಾಟ ನಡೆದಿದೆ. ರಾಯಲ್ಟಿ ಇಲ್ಲದಿದ್ದರೂ ಪೊಲೀಸರ ಕಣ್ಣು ಎದುರಿಗೆ ವಾಹನ ಸಂಚಾರ ನಡೆಸುತ್ತಿವೆ. ಕಣ್ಣಿಗೆ ಕಂಡರು ಕ್ಯಾರೇ ಎನ್ನದ ಪೊಲೀಸರ ನಡೆ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ರಮ ಮರಳು ತುಂಬಿದ ಟಿಪ್ಪರ ಮತ್ತು ಟ್ಯಾಕ್ಟರ್‌ಗಳು ಪೊಲೀಸ್ ಗಸ್ತು ಇದ್ದರೂ ಇದರ ಮಧ್ಯೆಯೂ ಮರಳು ತುಂಬಿದ ಟಿಪ್ಪರ, ಟ್ಯಾಕ್ಟರ್‌ಗಳು ರಾಜರೋಷವಾಗಿ ಓಡಾಡುತ್ತಿರುವುದಕ್ಕೆ ರಾಜಕೀಯ ಕೃಪಾಶ್ರಯೊಂದಿಗೆ ಪೊಲೀಸ್ ಸರ್ಪಗಾಲು ಕೂಡ ಸಾಥ್ ಇರುವುದಾಗಿ ಜನ ಮಾತಾಡಿಕೊಳ್ಳುವಂತಾಗಿದೆ. ಅಕ್ರಮ ಮರಳು ತುಂಬಿದ ಟಿಪ್ಪರ, ಟ್ಯಾಕ್ಟರ್‌ಗಳ ಓಡಾಟದಿಂದ ಈ ಹಿಂದೆ ಸಾಕಷ್ಟು ಅಪಘಾತಗಳು ಸಂಭವಿಸಿದ್ದು, ರಸ್ತೆಯ ಮೇಲೆ ಜನರು ನಡೆದಾಡಲು ಹಿಂದೇಟು ಹಾಕುವಂತಾಗಿದೆ.
ಅಕ್ರಮ ಮರಳು ಮಾಫಿಯಾ ತಡೆಯಬೇಕಾದ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿರುವುದು ಮೇಲ್ನೋಟಕ್ಕೆ ಸ್ವಷ್ಟವಾಗಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.