ಅಕ್ರಮ ಮರಳು : ಟ್ರಾಕ್ಟರ್‌ಗೆ ಮರ ಬಲಿ‌

ಸಿಂದನೂರು.ನ.10-ಅಕ್ರಮ ಮರಳು‌ ಟ್ರಾಕ್ಟರ್ ಮರಕ್ಕೆ‌ ಡಿಕ್ಕಿಒಡೆದ‌ ಪರಿಣಾಮ‌ 30 ವರ್ಷದ ಮರ ಬಲಿಯಾಗಿ ಪರಿಸರ ‌ಪ್ರೇಮಿಗಳ‌‌ ಆಕ್ರೋಶಕ್ಕೆ ಕಾರಣವಾಗಿದೆ ಇದರಿಂದ ಟ್ರಾಕ್ಟರ್ -ಅಂಗಡಿ‌ಯ ಮಾಲಿಕನ ವಿರುದ್ಧ ‌ಅರಣ್ಯ ಇಲಾಖೆಯಲ್ಲಿ ‌ವನಸಿರಿ‌ ಫೌಂಡೇಶನ್ ‌ದೂರು‌‌ ನೀಡಿದೆ.
ಗಂಗಾವತಿ ರಸ್ತೆಯಲ್ಲಿರುವ ಸಾಯಿಕೃಷ್ಣ ಅಂಗಡಿ ಮಾಲಿಕ ತನ್ನ ‌ಅಂಗಡಿಗೆ‌ ಮರ ಅಡ್ಡ ಬರುತ್ತಿದ್ದು ,ಮರವನ್ನು ತೆಗೆಯುವಂತೆ ಅರಣ್ಯ ‌ಇಲಾಖೆಗೆ ದೂರು‌ ನೀಡಿ‌ ಮನವಿ‌ ಮಾಡಿಕೊಂಡಿದ್ದರು .ಅರಣ್ಯ ಇಲಾಖೆ ಅಧಿಕಾರಿಗಳು ‌ಅಂಗಡಿ‌ ಮಾಲಿಕನ‌ ಮನವಿಯನ್ನು ‌ತಿರಸ್ಕರಿಸಿದ ಕಾರಣ ಸಿಟ್ಟಿಗೆದ್ದ ಅಂಗಡಿ‌ ಮಾಲಿಕ‌ ಅಕ್ರಮ ಮರಳಿ‌ನ ಟ್ರಾಕ್ಟರ್ ನಿಂದ ಡಿಕ್ಕಿ ಹೊಡೆಸಿ ಮರವನ್ನು ನಾಶ ಮಾಡುವ ‌ಮೂಲಕ ತನ್ನ ‌ಆಕ್ರೋಶವನ್ನು ಟ್ರಾಕ್ಟರ್ ಮೂಲಕ ತಿರಿಸಿಕೊಂಡಿದ್ದು ,ಟ್ರಾಕ್ಟರ್ ಹಾಗೂ ಅಂಗಡಿ‌ ಮಾಲಿಕನ ವಿರುದ್ಧ ವನಸಿರಿ ಫೌಂಡೇಶನ್ ಜಿಲ್ಲಾದ್ಯಕ್ಷರಾದ ‌ಅಮರೇಗೌಡ ಮಲ್ಲಾಪುರ ಅರಣ್ಯ ಇಲಾಖೆಗೆ ದೂರು ನೀಡಿ‌ ಕ್ರಮಕ್ಕಾಗಿ ‌ಒತ್ತಾಯಿಸಿದ್ದಾರೆ.