ಅಕ್ರಮ ಮರಳು ಟಿಪ್ಪರ್‌ಗಳ ಹಾವಳಿ ಹದಗೆಟ್ಟ ನಗರಗುಂಡ ರಸ್ತೆ

ಗಬ್ಬೂರು.ಸೆ.೧೫-ದೇವದುರ್ಗ ತಾಲೂಕಿನ ನಗರಗುಂಡ ರಸ್ತೆಯಲ್ಲಿ ಬರುವ ದೊಂಡಂಬಳಿ ಹೃದಯ ಭಾಗದಲ್ಲಿ ಹಾದು ಹೋಗುವ ನಗರಗುಂಡ ರಸ್ತೆ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವ ಟಿಪ್ಪರ್‌ಗಳ ಹಾವಳಿಗೆ ಸಂಪೂರ್ಣವಾಗಿ ರಸ್ತೆ ಕೆಟ್ಟು ಹೋಗಿದೆ.
ಯಾವುದೇ ಪರವಾನಿಗೆ ಪಡೆಯದೆ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದು, ನಗರಗುಂಡ ಮಾರ್ಗವಾಗಿ ಓಡಾಡುವ ಟಿಪ್ಪರ್‌ಗಳು ಜನರು ರಸ್ತೆಯಲ್ಲಿ ಓಡಾಡಲು ಭಯಭೀತರಾಗಿದ್ದಾರೆ. ಹಗಲು-ರಾತ್ರಿಯೆನ್ನದೆ ಟಿಪ್ಪರ್‌ಗಳ ಹಾವಳಿ ಹೆಚ್ಚಾಗಿದ್ದು ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ಮೌನವಹಿಸಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಕೂಡಲೇ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸಿ ಅಕ್ರಮ ಮರಳು ಸಾಗಾಣಿಕೆಯ ಟಿಪ್ಪರ್‌ಗಳ ಕಡಿವಾಣಕ್ಕೆ ಮುಂದಾಗಬೇಕೆಂದು ಜನ ಸಂಗ್ರಾಮ ಪರಿಷತ್ ಮುಖಂಡರಾದ ಬಸವರಾಜಗೌಡ ನಗರಗುಂಡ ಅವರ ಒತ್ತಾಯವಾಗಿದೆ.