ಅಕ್ರಮ ಮರಳು ಜಪ್ತಿ

ಕಲಬುರಗಿ.ಸೆ.14: ನಗರದ ಆಳಂದ-ಹುಮನಾಬಾದ ರಿಂಗ್‍ರೋಡ್‍ಗೆ ಹೊಂದಿಕೊಂಡಿರುವ ಶೇಖರೋಜಾ ಪ್ರದೇಶದಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಮಾಡಲಾಗಿದೆ ಎಂಬ ಮಾಹಿತಿಯಂತೆ ತಹಸೀಲ್ದಾರರು ದಾಳಿ ನಡೆಸಿ ನೂರಾರು ಟ್ರಿಪ್‍ನಷ್ಟು ಉಸುಕು, ಜೆಸಿಬಿ ಇನ್ನಿತರ ಯಂತ್ರಗಳನ್ನು ಜಪ್ತಿ ಮಾಡಿದ್ದಾರೆ.
ಖಚಿತ ಮಾಹಿತಿಯಂತೆ ತಹಸೀಲ್ದಾರ ಪ್ರಕಾಶ ಕುದರಿ, ಗಣಿ-ಭೂವಿe್ಞÁನಿ ಇಲಾಖೆಯ ವೀರೇಶ ಹಾಗೂ ಕಂದಾಯ ನಿರೀP್ಷÀಕರು, ಗ್ರಾಮ ಲೇಖಪಾಲಕರು ಕೂಡಿಕೊಂಡು ಆಳಂದ -ಹುಮಬಾಬಾದ ರಿಂಗï ರೋಡ್‍ನ ಎಡ ಭಾಗದಲ್ಲಿರುವ ಶೇಖರೋಜಾ ಸರ್ವೇ ನಂಬರ್ 50/16 ಬಡಾವಣೆಯಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಮಾಡಿದ್ದರು. ಅದನ್ನು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರು. ದಾಳಿ ಮಾಡಿ ಜಪ್ತಿ ಮಾಡಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.