ಅಕ್ರಮ ಮರಳುಗಾರಿಕೆ ದಾಳಿ ನಡೆಸಿ ಯಂತ್ರೋಪಕರಣ ಜಪ್ತಿ

ಕಲಬುರಗಿ:ಮಾ.20:ಭೀಮಾ ನದಿ ತೀರದಲ್ಲಿರುವ ತಾಲೂಕಿನ ಅವರಾದ (ಕೆ) ಗಾಮದ ಬಳಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿಯಂತೆ ಕಂದಾಯ, ಪೆÇಲೀಸ್ ಇಲಾಖೆಯವರು ಜಂಟಿಯಾಗಿ ದಾಳಿ ನಡೆಸಿ ದಾಸ್ತಾನು ಮಾಡಿದ್ದ ಉಸುಕು ಮತ್ತು ಯಂತ್ರೋಪರಕರಣಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ತಹಸೀಲ್ದಾರ ಪ್ರಕಾಶ ಕುದರಿ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ತಮ್ಮರಾಯ ಪಾಟೀಲ್ ಹಾಗೂ ಇತರರು ಕೂಡಿಕೊಂಡು ಶನಿವಾರ ದಾಳಿ ನಡೆಸಿ ಭೀಮಾ ನದಿಯಿಂದ ಮರಳು ತೆಗೆಯುತ್ತಿದ್ದ ಹಿಟಾಚಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಅಲ್ಲದೆ ನದಿಯಿಂದ ಹೊರ ತೆಗೆದ ಮರಳು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.