
ವಿಜಯಪುರ :ಮೇ.25: ದೇವರಹಿಪ್ಪರಗಿ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟುವಂತೆ ಇಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷರಾದ ಶಿವಾನಂದ ಯಡಹಳ್ಳಿ ಅವರ ನೇತೃತ್ವದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಳೆದ ಎರಡು ತಿಂಗಳ ಹಿಂದೆ ಅಕ್ರಮ ಮರಳುಗಾರಿಕೆ ತಡೆಯುವಂತೆ ದೇವರಹಿಪ್ಪರಗಿ ತಹಸೀಲ್ದಾರ ಕಚೇರಿ ಸೇರಿದಂತೆ ದೇವರಹಿಪ್ಪರಗಿ ಮತ್ತು ಕಲಕೇರಿ ಪೆÇಲೀಸ್ ಠಾಣೆಗಳಿಗೆ ದೂರನ್ನು ಸಲ್ಲಿಸಲಾಗಿತ್ತು. ಅಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಳ್ಳದೆ ಇರುವುದರಿಂದಾಗಿ ಅಕ್ರಮ ಮರಳು ಸಾಗಾಣಿಕೆ ಸಂದರ್ಭದಲ್ಲಿ ಕೆಸರಟ್ಟಿ ಗ್ರಾಮದ ಹತ್ತಿರ ಮರಳು ತುಂಬಿದ ಟ್ಯಾಕ್ಟರ್ ಪಲ್ಟಿಯಾಗಿ ಅಮಾಯಕ ಕಾರ್ಮಿಕನೊಬ್ಬನ ಸಾವು ಸಂಭವಿಸಿತ್ತು. ಇಷ್ಟಾದರೂ ಅಕ್ರಮ ಮರಳುಗಾರಿಕೆಗೆ ಪೆÇಲೀಸ್ ಇಲಾಖೆಯ ಕೆಲವೊಂದಿಷ್ಟು ಅಧಿಕಾರಿಗಳು ಸಾಥ ನೀಡಿರುವುದರಿಂದಾಗಿ ಮತ್ತೆ ಯಥೇಚ್ಛವಾಗಿ ಮರಳುಗಾರಿಕೆ ದಂಧೆ ನಡೆಯುವುದನ್ನು ಕಂಡು ನಾನೇ ದೇವರ ಹಿಪ್ಪರಗಿ ನಗರದ ಮೋರೆ ಹಣಮಂತರಾಯ ಸರ್ಕಲ್ ದಿಂದ ಪೆÇಲೀಸ್ ಠಾಣೆಯವರೆಗೂ ದೀರ್ಘ ದಂಡ ನಮಸ್ಕಾರ ಹಾಕಿಕೊಂಡು ಹೋಗಿ ಈಗಲಾದರೂ ನಿಮ್ಮ ಕರ್ತವ್ಯವನ್ನು ಸರಿಯಾಗಿ ಪಾಲಿಸಿ ಎಂದು ಕೈಮುಗಿದು ಕೇಳಿಕೊಳ್ಳಲಾಗಿತ್ತು. ಅಷ್ಟಾದರೂ ಯಾವುದೇ ಕ್ರಮವನ್ನು ಕಂದಾಯ ಇಲಾಖೆಯಾಗಲಿ ಪೆÇಲೀಸ್ ಇಲಾಖೆಯಾಗಲಿ ಕೈಗೊಂಡಿರುವುದಿಲ್ಲ. ಹಾಗಾಗಿ ಇಂದು ಜಿಲ್ಲಾಧಿಕಾರಿಗಳು ವಿಜಯಪುರ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಬೇಟಿಯಾಗಿ ದೂರನ್ನು ಸಲ್ಲಿಸಿ ಅಕ್ರಮ ಮರಳುಗಾರಿಕೆ ತಡೆಯುವಂತೆ ತಿಳಿಸಲಾಯಿತು. ಒಂದು ವೇಳೆ ಅಕ್ರಮ ಮರಳುಗಾರಿಕೆ ತಡೆಯಲು ಅಧಿಕಾರಿಗಳು ವಿಫಲರಾದರೆ ಬೆಂಗಳೂರಿನ ವಿಧಾನಸೌಧದ ಮುಂದೆ ಅರೆಬೇತ್ತಲೆ ಹೋರಾಟವನ್ನು ಮಾಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷರಾದ ಅಮಿದ್ ಇನಾಮ್ದಾರ, ರಾಕೇಶ ಇಂಗಳಗಿ, ಪ್ರಕಾಶ ಪಾಟೀಲ, ಪ್ರವೀಣ ಕನಸೆ, ರಾಘವೇಂದ್ರ ಚಲವಾದಿ, ಮೈಬೂಬ್ ತಾಂಬೋಳಿ ಇನ್ನಿತರರು ಉಪಸ್ಥಿತರಿದ್ದರು.