ಅಕ್ರಮ ಮರಳುಗಾರಿಕೆಯಲ್ಲಿ ಯಾರೇ ತೊಡಗಿದ್ದರೂ ಕಠಿಣ ಕ್ರಮ: ಡಿಸಿ, ಎಸ್ಪಿಗೆ ಶಾಸಕರ ತಾಕೀತು

ಕಲಬುರಗಿ :ಮಾ.01:ಜೇವರ್ಗಿ ಮತಕ್ಷೇತ್ರದಲ್ಲಿ ಅಕ್ರಮ ಮರಳುಗಾರಿಕೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳಿಗೆ ಶಾಸಕರು ಹಾಗೂ ವಿರೋಧ ಪಕ್ಷ ಮುಖ್ಯ ಸಚೇತಕರಾಗಿರುವ ಡಾ. ಅಜಯ್ ಸಿಂಗ್ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಯಶ್ವಂತ ಗುರುಕರ್ ಹಾಗೂ ಎಸ್ಪಿ ಇಸಾ ಪಂತ್ ಅವರಿಗೆ ಕರೆ ಮಾಡಿ ಮಾತನಾಡಿರುವೆ. ಭೀಮಾ ನದಿ ತೀರದಲ್ಲಿ ಎಲ್ಲಿಯೂ ಅಕ್ರಮ ಮರಳುಗಾರಿಕೆಗೆ ಅವಕಾಶ ನೀಡಕೂಡದೆಂದು ತಾಕೀತ ಮಾಡಿರುವೆ ಎಂದು ಡಾ. ಅಜಯ್ ಸಿಂಗ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನೆಲೋಗಿ ಗ್ರಾಮದ ಭೀಮಾ ತೀರದಲ್ಲಿ ಈಚೆಗೆ ಅಕ್ರಮ ಮರಳುಗಾರಿಕೆಗೆ ಸಿದ್ಧತೆ ನಡೆದಿರುವಾಗಲೇ ಈ ಸಂಗತಿ ಗಮನಕ್ಕೆ ಬಂದಿದ್ದು ತಕ್ಷಣ ನೆಲೆಗೋ ಇಸೇರಿದಂತೆ ಮರಳುಗಾರಿಕೆಯ ಅಕ್ರಮ ನಡೆಯಬಹುದಾದ ಜೇವರ್ಗಿ ಭೀಮಾ ತೀರದ ಎಲ್ಲಾಕಡೆ ಅಗತ್ಯ ಕಟ್ಟುನಿಟ್ಟಿನ ಕ್ರಮಕ್ಕೂ ತಾವು ಸೂಚಿಸಿದ್ದಾಗಿ ಡಾ. ಅಜಯ್ ಸಿಂಗ್ ಹೇಳಿದ್ದಾರೆ.

ವಿರೋಧ ಪಕ್ಷದವರು ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆಲ್ಲ ತಾವು ಸೊಪ್ಪು ಹಾಕೋದಿಲ್ಲ. ಮರಳು ಅಕ್ರಮ ಮಾಡೋದು ನಿಸರ್ಗ ಸಂಪತ್ತಿನ ಲೂಚಿ ಮಾಡಿದಂತೆ. ಇಂತಹ ಅಪರಾಧದಲ್ಲಿ ಯಾರೇ ತೊಡಗಿದ್ದರೂ ತಕ್ಷಣ ಜಿಲ್ಲಾಡಳಿತ ಅಂತಹವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಜೇವರ್ಗಿ ಸುತ್ತಲಿನ ಭೀಮಾ ತೀರದಲ್ಲಿ ಅಕ್ರಮ ಮರಳುಗಾರಿಕೆಗೆ ಯಾವುದೇ ಕಾರಣಕ್ಕೂ ತಾವು ಅವಕಾಶ ನೀಡೋದಿಲ್ಲವೆಂದೂ ಡಾ. ಅಜಯ್ ಸಿಂಗ್ ಇದೇ ಸಂದರ್ಭದಲ್ಲಿ ಘೋಷಿಸಿದ್ದಾರೆ.