ಅಕ್ರಮ ಮರಳಿನ ಬಂಡಿ ಲಾರಿಗಳು ಡಿಕ್ಕಿ – ಓರ್ವ ಸಾವು

ಸಿಂಧನೂರ,ಜು.೧೫- ಅಕ್ರಮ ಮರಳಿನ ಬಂಡಿ ಹಾಗೂ ಸಿಮೆಂಟ್ ಮತ್ತು ಆಯಿಲ್ ಎರಡು ಲಾರಿಗಳು ಮುಖಾ ಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲಿ ಸಾವನ್ನಪ್ಪಿ ಹಲವರು ಗಾಯಗೊಂಡ ಘಟನೆ ಇಂದು ಮುಂಜಾನೆ ೬ ಗಂಟೆಗೆ ನಗರದ ಪಿಡಬ್ಲ್ಯೂಡಿ ಕ್ಯಾಂಪನ್ ಮಾಂಟೆಸ್ಸರಿ ಶಾಲೆಯ ಹತ್ತಿರ ಸಂಭವಿಸಿದೆ.
ಗುಲ್ಬರ್ಗದ ಮಳಖೇಡದಿಂದ ಸಿಮೆಂಟ್ ತುಂಬಿದ ಲಾರಿ ಹೊಸ ಪೇಟೆಗೆ ಹೊರಟಿದ್ದು ಹಾವೇರಿಯಿಂದ ಆಯಿಲ್ ಲಾರಿ ಹೈದರಾಬಾದ್‌ಗೆ ಹೊರಟಿದ್ದ ಎದುರಿಗೆ ಬಂದ ಎತ್ತಿನ ಮರಳಿನ ಬಂಡಿಯನ್ನು ರಕ್ಷಣೆ ಮಾಡಲು ಹೋಗಿ ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಮಳಖೇಡ ಲಾರಿಯ ಮಾಲೀಕ ರವಿಕುಮಾರ ೩೦ ಸ್ಥಳದಲ್ಲಿ ಸಾವನ್ನಪ್ಪಿದ್ದು ಲಾರಿಯಲ್ಲಿದ್ದ ಮಳಖೇಡ ಲಾರಿಯ ಚಾಲಕ ಸಿದ್ದು ಹಾಗೂ ಹಾವೇರಿ ಲಾರಿಯ ಚಾಲಕ ಇಮ್ರಾನ್ ೩೦ ನೂರುಲ್ಲಾ ೩೫ ಎತ್ತಿನ ಬಂಡಿ ಮಾಲೀಕ ರಂಗಪ್ಪ ೫೦ ವರ್ಷ ಗಂಭೀರ ಸ್ವರೂಪದ ಗಾಯಗಳಾಗಿವೆ.
ಎತ್ತಿನ ಬಂಡಿ ಹಾಗೂ ಎರಡು ಲಾರಿಗಳು ಸಂಪೂರ್ಣ ಜಖಂ ಗೊಂಡಿದ್ದು ಎರಡು ಎತ್ತಿಗಳಿಗೆ ಸಹ ಗಾಯಗೊಂಡಿವೆ ಸಿದ್ದು, ನೂರುಲ್ಲಾ, ಇಮ್ರಾನ್‌ಗೆ ತೀವ್ರ ಗಾಯಗೊಂಡಿದ್ದು ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಪೋಲೀಸರು ದಾಖಲಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕಳಿಸಲಾಗಿದೆ. ಅಪಘಾತ ನಡೆದ ರಾಯಚೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಾಲು ಗಟ್ಟಿ ನಿಂತು ರಸ್ತೆ ಸಂಚಾರ ಅಸ್ತವ್ಯಸ್ತ ಗೊಂಡಿತ್ತು.
ಸಂಚಾರಿ ಠಾಣೆಯ ಪಿಎಸ್‌ಐ ಬಸವರಾಜ ತಮ್ಮ ಶಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಬಂಧು ಪರಿಶೀಲನೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು ಮುಂಜಾನೆ ನಡೆದ ಅಪಘಾತ ಸುದ್ದಿ ಕೇಳಿದ ನಗರದ ಜನತೆ ಭಯ ಬೀತರಾಗಿದ್ದಾರೆ ಎಂದರು.