ಅಕ್ರಮ ಮರಳಿನ ಟ್ರಾಕ್ಟರ್ ವಶ ಪ್ರಕರಣ ದಾಖಲು

ಸಿಂಧನೂರು,ಆ.೨೨-
ನಗರ ಠಾಣೆಯ ಪೋಲೀಸರು ದಾಳಿ ಮಾಡಿ ಅಕ್ರಮ ಮರಳು ಸಾಗಿಸುತ್ತಿದ್ದ ಟ್ರಾಕ್ಟರನ್ನು ವಶ ಪ್ರಕರಣ ಪ್ರಕರಣ ದಾಖಲು ಮಾಡಿದ್ದಾರೆ ಟ್ರಾಕ್ಟರ್ ಮಾಲೀಕ ರಜಾಕ್ ಓಡಿ ಹೋಗಿದ್ದಾನೆ.
ನಗರದ ಬಪ್ಪೂರ ರಸ್ತೆ ಇಂಡಿಯನ್ ಬ್ಯಾಂಕ್ ಹತ್ತಿರ ಹಗಲು ಸಮಯದಲ್ಲಿ ಟ್ರಾಕ್ಟರ್‌ನಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ನಗರ ಠಾಣೆಯ ಎಎಸ್‌ಐ ಶಿವರಾಜ. ತಮ್ಮ ಸಿಬ್ಬಂದಿಗಳ ಜೊತೆಗೆ ದಾಳಿ ಮಾಡಿ ಟ್ರಾಕ್ಟರ್ ಇಡಿದು ಠಾಣೆಗೆ ತಂದು ೩೭೯ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ಯಾಕ್ಟರ್ ಮಾಲೀಕ ರಾಜಾಕ್ ಟ್ಯಾಕ್ಟರ್ ಬಿಟ್ಟು ಪರಾರಿ ಯಾಗಿದ್ದಾನೆ ಎಂದು ತಿಳಿದು ಬಂದಿದೆ ಪೋಲಿಸರ ಕಟ್ಟು ನಿಟ್ಟಿನ ಕ್ರಮ ಕೈಗೊಂಡರು ಸಹ ಈ ಆಸಾಮಿ ಹಗಲು ಸಮಯದಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದಾಗ ಪೋಲಿಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.