ಅಕ್ರಮ ಮನೆ ಸಕ್ರಮ

ಶಿವಮೊಗ್ಗ ಅ. ೨೮- ರಾಜ್ಯದ ಯಾವುದೇ ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳ ಜಾಗದಲ್ಲಿ ಯಾರು ಮನೆಗಳನ್ನ ಈಗಾಗಲೇ ಕಟ್ಟಿಕೊಂಡಿದಾರೆ ಅವರಿಗೆ ಅಲ್ಲಿಯೇ ಹಕ್ಕು ಪತ್ರ ನೀಡುವ ತೀರ್ಮಾನ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ

ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯದಲ್ಲಿ ಕ್ರಮ ತೆಗೆದುಕೊಂಡಿದ್ದೇವೆ. ರಾಜ್ಯದಲ್ಲಿ ಆಶ್ರಯ ಸಮಿತಿಗಳನ್ನು ಮಾಡಿ ಭೂಮಿ ಖರೀದಿಸಿ ರಾಜ್ಯ ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಆಶ್ರಯ ಸಮಿತಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾದ ಸಬ್ಸಿಡಿ ಕೊಟ್ಟು ಫಲಾನುಭವಿಗಳಿಂದ ಕೂಡ ಹಣ ತೆಗೆದುಕೊಂಡು ಬ್ಯಾಂಕ್ ಸಾಲ ಕೂಡ ಕೊಡಿಸಿ ಕಡು ಬಡವರಿಗೆ ಮನೆಗಳನ್ನು ಕಟ್ಟಿಕೊಡಬೇಕೆಂಬ ವೀಶೇಷವಾದ ಯೋಜನೆಯೇ ಆಶ್ರಯ ಯೋಜನೆ ಎಂದು ಅವರು ತಿಳಿಸಿದ್ದಾರೆ.

ಆಶ್ರಯ ಯೋಜನೆ ಮುಖಾಂತರ ಶಿವಮೊಗ್ಗದ ವಿರುಪನಕೊಪ್ಪದಲ್ಲಿ ಅಡಿಕೆ ಮಂಡಿಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಸುಮಾರು ೬೭೫ ಮನೆಗಳನ್ನು ಈಗಾಗಲೇ ನಿರ್ಮಿಸಿಕೊಡಲಾಗಿದೆ. ಅವರು ಅಲ್ಲಿಯೇ ವಾಸ ಮಾಡುತ್ತಿದ್ದಾರೆ. ಬೊಮ್ಮನಕಟ್ಟೆ ಭಾಗದಲ್ಲೂ ಕೂಡ ನಿವೇಶನಗಳನ್ನು ಮತ್ತು ಮನೆಗಳನ್ನು ನೀಡಲಾಗಿ ಅಲ್ಲಿಯೂ ಕೂಡ ಒಂದು ಹಂತಕ್ಕೆ ಬಂದಿದೆ ಎಂದು ಅವರು ತಿಳಿಸಿದರು

ಯೋಜನೆಯ ಸದುಪಯೋಗವನ್ನು ಅರ್ಹರಿಗೆ ನೀಡಿ ಅವರು ಬದುಕು ಹಸನಾಗುವಂತೆ ಮಾಡುವುದು ನಮ್ಮ ಸ್ಥಳೀಯ ಸಂಸ್ಥೆಗಳು ಮತ್ತು ಅಧಿಕಾರಿಗಳ ಕರ್ತವ್ಯ ಎಂದರು..