ಅಕ್ರಮ ಮನೆ ನಿರ್ಮಾಣ ತೆರವಿಗೆ ಆಳ್ಳಪ್ಪ ಆಗ್ರಹ

ರಾಯಚೂರು.ನ.08- ರಾಯಚೂರು.ನ.8.ದೇವದುರ್ಗ ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 9 ರಲ್ಲಿ ಅಕ್ರಮವಾಗಿ ಕಟ್ಟಿರುವ ಮನೆಯನ್ನು ತೆರವುಗೊಳಿಸಲು ದೇವದುರ್ಗ ಸ್ಥಳೀಯ ನಿವಾಸಿ ಆಳ್ಳಪ್ಪ ಅವರು ಆಗ್ರಹಿಸಿದರು.
ಅವರಿಂದು ಸುದ್ದಿಗರೊಂದಿಗೆ ಮಾತಾನಡುತ್ತ, ದೇವದುರ್ಗ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 9 ರಲ್ಲಿ ಗೌರಮ್ಮ ಗಂಡ ಅಮರಣ್ಣ ಅವರು ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಯನ್ನು ತೆರವು ಗೊಳಿಸಲು 2018 ರ ಮೇ15ರಂದು ಲೋಕಾಯುಕ್ತ ಇಲಾಖೆಯಿಂದ ಮನೆ ತೆರವುಗೊಳಿಸಲು ಜಿಲ್ಲಾಡಳಿತಕ್ಕೆ ಮತ್ತು ದೇವದುರ್ಗ ಪುರಸಭೆ ಅಧಿಕಾರಿಗಳಿಗೆ ನೋಟಿಸ್ ನೀಡಿದರು ಇದುವರೆಗೂ ಮನೆಯನ್ನು ತೆರವು ಗೊಳಿಸಿರುವುದಿಲ್ಲ.
ಈ ವಿಷಯಕ್ಕೆ ಸಂಬಂಧಿಸಿದಂತೆ ಸುಮಾರು 80 ಬಾರಿ ಜಿಲ್ಲಾಡಳಿತಕ್ಕೆ ಮತ್ತು ಪುರಸಭೆಗೆ ಮನವಿ ಸಲ್ಲಿಸಿದರು ಯಾವುದೇ ಕ್ರಮಕೈಗೊಂಡಿಲ್ಲ,
ನಂತರದಲ್ಲಿ 2018 ನ.5ರಂದು ಅಂದಿನ ಪುರಸಭೆ ಯೋಜನಾಧಿಕಾರಿಗಳು ಈರಣ್ಣ ಬಿರಾದಾರ,ಮುಖ್ಯಾಧಿಕಾರಿ ಫಿರೋಜ್ ಖಾನ್ ಇವರು ಸ್ಥಳಕ್ಕೆ ಬಂದೆ ಪರಿಶೀಲನೆ ನಡಿಸಿರುತ್ತಾರೆ ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಾಧಿಕಾರಿ ಶರಣಪ್ಪ ಅವರು ನೀವು ಪುರಸಭೆಯ ಸ್ಥಳ ಹಾಗೂ ಸಾರ್ವಜನಿಕ ರಸ್ತೆಯನ್ನು ಅಕ್ರಮಿಸಿದ್ದೀರಿ ಎಂದು 2020ರ ಜು.24ರಂದು ಮತ್ತು ಜು.13 ರಂದು ನನಗೆ ನೋಟಿಸ್ ನೀಡಿದ್ದಾರೆ,
ಅದರಿಂದ ನಾನು ಈ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ,ಮುಖ್ಯಮಂತ್ರಿ,ಜಿಲ್ಲಾಡಿಳಿತಕ್ಕೆ ಅಲವರು ಬಾರಿ ಮನವಿ ಸಲ್ಲಿಸಿದೇನೆ ಅದರಿಂದ ನನಗೆ ಜೀವ ಬೆದರಿಕೆ ಇದೆ ಎಂದು ತಿಳಿಸಿದರು. ನನಗೆ ಯಾವುದೇ ತೊಂದರೆ ಬಂದರೆ ಅದಕ್ಕೆ ಜಿಲ್ಲಾಡಳಿತ ಮತ್ತು ಪುರಸಭೆ ಅಧಿಕಾರಿಗಳೇ ನೇರ ಹೊಣೆ ಎಂದು ಹೇಳಿದರು.