ಅಕ್ರಮ ಮಧ್ಯ ಸಾಗಾಣಿ: ಆರೋಪಿ ಬಂಧನ

ಸಂಜೆವಾಣಿ ವಾರ್ತೆ
ಹನೂರು ಫೆ 3 :- ರಾಜ್ಯದಿಂದ ತಮಿಳುನಾಡಿನ ಕಡೆಗೆ ಅಕ್ರಮವಾಗಿ ಮಧ್ಯ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಒಬ್ಬನನ್ನು ಪೆÇಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.
ತಾಲೂಕಿನ ರಾಜ್ಯದ ಗಡಿಭಾಗದ ಅರ್ಧನಾರೀಪುರ ಚೆಕ್ ಪೆÇೀಸ್ಟ್ ಬಳಿ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಾಣೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ತಮಿಳುನಾಡಿನ ಶಿರಾಮೊಗೆ ಗ್ರಾಮದ ವಾಸಿಯಾಗಿರುವ ಮಗೇಶ್ ಕುಮಾರ್ ಬಿನ್ ಮಣಿ ಬಂಧಿತ ಆರೋಪಿಯಾಗಿದ್ದಾನೆ. ಅಕ್ರಮ ಮದ್ಯ ಮಾರಾಟದ ಹಿನ್ನಲೆ ಅಂಜನಾದ್ರಿ ಬಾರ್ ಮೇಲೆ ಪೆÇೀಲೀಸರ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಅಕ್ರಮವಾಗಿ ಮಧ್ಯಸಾಗಟ ಮಾಡುತ್ತಿರುವ ಖಚಿತ ಮಾಹಿತಿಯ ಮೇರೆಗೆ ಕೊಳ್ಳೇಗಾಲ ಡಿವೈಎಸ್ಪಿ ಧರ್ಮೆಂದ್ರ ಕುಮಾರ್ ಹಾಗೂ
ಇನ್ಸಪೆಕ್ಟರ್ ಶಶಿಕುಮಾರ್ ರವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಒಡೆಯರ್ ಪಾಳ್ಯ ಉಪ ಠಾಣೆಯ ಮುಖ್ಯಪೇದೆ ದೊಡ್ಡವೀರ ಶೆಟ್ಟಿ, ಪೇದೆಗಳಾದ ಶಿವಕುಮಾರ್ ಮಂಜುನಾಥ್ ಮತ್ತು ಚೆಕ್ ಪೆÇೀಸ್ಟ್ ಕರ್ತವ್ಯದಲ್ಲಿದ್ದ ದಶರಥ್ ಭಾಗವಹಿಸಿದ್ದರು. ಪೆÇಲೀಸ್ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಪ್ರಸಾದ್ ರವರು ಪ್ರಕರಣ ದಾಖಲಿದ್ದಾರೆ.