
ಮಾನ್ವಿ ಮಾ ೧೦ :- ಕೋನಾಪುರ ಪೇಟೆ ಹಾಗು ಜನತಾ ಕಾಲೋನಿ ಮುಸ್ಟೂರು ರಸ್ತೆ, ಹಾಗೂ ಕಾತರಕಿ ರಸ್ತೆ, ಪೂಜಾ ರೈಸ್ ಮೀಲ್ ಹತ್ತಿರವಿರುವ ಬಹುತೇಕ ಅಂಗಡಿ ಹಾಗೂ ಹೋಟಲ್ ಕೆಲವು ಮನೆಗಳಲ್ಲಿ ರಾಜಾರೋಪವಾಗಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿರುವುದಕ್ಕೆ ಮಲ್ಲಯ್ಯ ಗೌಡ ಗಣೇಕಲ್ ಮತ್ತು ಜಿ.ನಾಗರಾಜು ಸಾದಪ್ಪ ಅವರ ಮಾಲಿಕತ್ವದ ಮಧ್ಯದ ಅಂಗಡಿಯಿಂದ ವಾಹನದ ಮೂಲಕ ಸ್ವತಃ ಅವರೇ ಆಕ್ರಮ ಮದ್ಯ ಮಾರಾಟ ಮಾಡುವವರಿಗೆ ಸರಬರಾಜು ಮಾಡಿ ಕುಮ್ಮಕ್ಕು ನೀಡಿ ಅಕ್ರಮಕ್ಕೆ ಕಾರಣವಾಗಿರುವ ಇವರ ಇವರು ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಕೆ ಆರ್ ಎಸ್ ಜಿಲ್ಲಾಧ್ಯಕ್ಷ ಅಶೋಕ ನಿಲೋಗಲ್ ತಾಲೂಕ ದಂಡಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ..
ನಂತರ ಮಾತಾನಾಡಿದ ಅವರು ಬಡವರ ಮಕ್ಕಳಿಗೆ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನಾಂದವರಿಗೆ ಯಾವುದೇ ಶಾಲೆ ಕಾಲೇಜು ಶುಲ್ಕದಲ್ಲಿ ಶೇಕಡಾ ೫೦% ಕಡಿಮೆ ಮಾಡಬೇಕು, ಬುರಂಪೂರು ಗ್ರಾಮದ ಸರ್ವೆ ನಂಬರ್ ೫೨ ರಲ್ಲಿ ಮದ್ಲಾಪೂರ ಗ್ರಾಮಕ್ಕೆ ಬರುವ ಹತ್ತು ಏಕರೆಯಷ್ಟು ಬಡವರಿಗೆ ಜಾಗ ಹಾಗೂ ವಸತಿಗಾಗಿ ಮೀಸಲು ಇಡಬೇಕು, ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರ ಹೆಸರಿನಲ್ಲಿ ಪಟ್ಟಾ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರಮುಖವಾಗಿ ಕೋನಾಪುರ ಪೇಟೆ, ಕಾತರಿಕಿ ರಸ್ತೆ,ಚಿಕಲಪರ್ವಿ ರಸ್ತೆ,ಮೂಸ್ಟೂರು ರಸ್ತೆ, ಜಡೆಬಸ್ಸಪ್ಪನ ಗುಡಿಯ ಸುತ್ತಮುತ್ತಲಿನ ಅನೇಕ ಅಂಗಡಿ,ಹೋಟೆಲ್, ಮನೆಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುವವರಿಗೆ ಮಧ್ಯದಂಗಡಿಯ ಮಾಲೀಕರಾದ ಮಲ್ಲಯ್ಯಗೌಡ ಗಣೇಕಲ್, ಜಿ ನಾಗರಾಜ ಸಾದಪ್ಪ ಇವರೇ ತಮ್ಮ ಮಧ್ಯವರ್ತಿಗಳ ಮೂಲಕ ಸರಬರಾಜು ಮಾಡಿ ಕಾನೂನು ಬಾಹಿರವಾದ ಚಟುವಟಿಕೆಗೆ ಕುಮ್ಕಕ್ಕು ನೀಡುತ್ತಿದ್ದಾರೆ ಹಾಗೂ ಮಧ್ಯದ ಪರವಾನಿಗೆಯ ಕಾನೂನು ಇತಿ ಮಿತಿಯನ್ನು ಮೀರಿ ಅಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ, ಶಾಂತಿಯುತವಾಗಿ ಇರಬೇಕಾದ ಏರಿಯಾದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ ಕೂಡಲೇ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಹಾಗೂ ಅವರ ಪರವಾನಿಗೆಯನ್ನು ರದ್ದು ಮಾಡದಿದ್ದಲ್ಲಿ ನಮ್ಮ ಸಂಘಟನೆಯಿಂದ ಸಾರ್ವಜನಿಕರೊಂದಿಗೆ ಮಹಿಳೆಯರನ್ನು ಕರೆದುಕೊಂಡು ಹೋಗಿ ಅಕ್ರಮ ಮಧ್ಯ ಸರಬರಾಜು ಮಾಡಲಾಗುತ್ತಿದೆ ಎಂದು ಆರೋಪಿಸಿದರು,
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡಾದ ವಿರೇಶ ನಾಯಕ, ಗಜೇಂದ್ರ ಕಲ್ಲೂರು, ನಾಗರಾಜ, ದೇವಪ್ಪ ಭಜಂತ್ರಿ,ವೆಂಕೋಬ ನಾಯಕ, ಪಕೀರಪ್ಪ ಚಿಕಲಪರ್ವಿ,ಮಲ್ಲೇಶ ಮದ್ಲಾಪೂರ,ಬಸವರಾಜ ನಾಯಕ, ವೆಂಕಟೇಶ, ಶಿವಯ್ಯ, ಗೌರಪ್ಪ,ಮಲ್ಲಯ್ಯ, ಮೌಲಸಾಬ್, ಮಲ್ಲಯ್ಯ, ಇದ್ದರು..