ಅಕ್ರಮ ಮದ್ಯ ಸಾಗಾಣಿಕೆ 6 ಪ್ರಕರಣ ದಾಖಲು


ಸಂಜೆವಾಣಿ ವಾರ್ತೆ
ಬಳ್ಳಾರಿ,ಏ.17: ಜಿಲ್ಲೆಯಲ್ಲಿ ಅಕ್ರಮ ಮದ್ಯ  ಸಾಗಾಣಿಕೆ ಸಂಬಂಧಿಸಿದಂತೆ 6 ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ  ಮಂಜುನಾಥ ಅವರು ತಿಳಿಸಿದ್ದಾರೆ.
ಸಿರುಗುಪ್ಪ ತಾಲ್ಲೂಕಿನ ಬೀರಳ್ಳಿ ಗ್ರಾಮದಿಂದ ರಾವಿಹಾಳ್ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ 51.840 ಲೀ. (ಅಂದಾಜು ಮೌಲ್ಯ ರೂ.48,045)
ಕುರುಗೋಡು ಪಟ್ಟಣದಿಂದ ಬಾದನಹಟ್ಟಿ ಗ್ರಾಮದ ಕಡೆ ಹೋಗುವ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ 7.380 ಲೀ. (ಅಂದಾಜು ಮೌಲ್ಯ ರೂ.64516),
ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದಿಂದ ದೇವಿನಗರ ಕ್ಯಾಂಪ್‍ಗೆ ಹೋಗುವ ಮಾರ್ಗ ಮದ್ಯದಲ್ಲಿ  ದ್ವಿಚಕ್ರ ವಾಹನದಲ್ಲಿ 17.100 ಲೀ. (ಅಂದಾಜು ಮೌಲ್ಯ ರೂ.78,589)   ಬಳ್ಳಾರಿ ನಗರದ ಗುಗ್ಗರಹಟ್ಟಿಯಿಂದ ಹೊನ್ನಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ತ್ರಿಚಕ್ರ ವಾಹನದಲ್ಲಿ 12.960 ಲೀ. (ಅಂದಾಜು ಮೌಲ್ಯ ರೂ.85,760),
ಸಿರುಗುಪ್ಪ ತಾಲ್ಲೂಕಿನ ಬೀರಳ್ಳಿ ಗ್ರಾಮದಿಂದ ರಾವಿಹಾಳ್ ಗ್ರಾಮಕ್ಕೆ ಹೋಗುವ ರಸ್ತೆಯಯಲ್ಲಿನ ಕಲ್ಲು ಕುಟಿಗಿನಹಾಳು(ಕೆ.ಕೆ ಹಾಳು) ಕ್ರಾಸ್ ನಲ್ಲಿ  ದ್ವಿಚಕ್ರ ವಾಹನದಲ್ಲಿ 51.840 ಲೀ. (ಅಂದಾಜು ಮೌಲ್ಯ ರೂ.48,045) ಸಾಗಾಣೆ ಮಾಡುತ್ತಿತ್ತು.
ಬಳ್ಳಾರಿ ತಾಲ್ಲೂಕಿನ ಜಾನೇಕುಂಟೆ ತಾಂಡಾದಲ್ಲಿನ ಕಿರಾಣಿ ಅಂಗಡಿಯ ಮೇಲೆ ದಾಳಿ ಮಾಡಿದಾಗ ಅಕ್ರಮವಾಗಿ 9.000 ಲೀ. ಮದ್ಯ ಮತ್ತು 6.500 ಲೀ. ಬಿಯರ್ (ಅಂದಾಜು ಮೌಲ್ಯ ರೂ.7,360) ಹೊಂದಿದ್ದಕ್ಕಾಗಿ ವಶಕ್ಕೆ ಪಡೆದುಕೊಂಡು ಮದ್ಯ ಮತ್ತು ಬಿಯರ್ ಜಪ್ತು ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ