ಅಕ್ರಮ ಮದ್ಯ ಸಾಗಾಟ-ವ್ಯಕ್ತಿ ಬಂಧನ

ರಾಮದುರ್ಗ, ಡಿ 26- ತೆಲಂಗಾಣದ ವ್ಯಕ್ತಿಯೊಬ್ಬ ಗೋವಾದಿಂದ ತನ್ನ ವಾಹನದಲ್ಲಿ ಬಚ್ಚಿಟ್ಟು ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಮತ್ತು ವಾಹನವನ್ನು ರಾಮದುರ್ಗದ ಅಬಕಾರಿ ಅಧಿಕಾರಿಗಳು ತಾಲ್ಲೂಕಿನ ಪಂಚಗಾಂವಿ ಕ್ರಾಸ್‍ಹತ್ತಿರ ಗುರುವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಒಟ್ಟು 22.5 ಲೀಟರ್‍ವಿವಿಧ ನಮೂನೆಯ ಗೋವಾ ಮದ್ಯ ಮತ್ತು ಸಾಗಾಟ ಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ತೆಲಂಗಾಣ ಮೂಲದ ಜುಮ್ಮಾ ಮಹೇಶ ಎಂಬುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯದ ಒಟ್ಟು ಮೌಲ್ಯ ರೂ. 65 ಸಾವಿರ ಮತ್ತು ವಾಹನದ ಮೌಲ್ಯ ರೂ. 16 ಲಕ್ಷ ಎಂದು ಅಂದಾಜಿಸಲಾಗಿದೆ.
ದಾಳಿಯಲ್ಲಿ ರಾಮದುರ್ಗ ಉಪ ವಲಯದ ಉಪ ಅಧೀಕ್ಷಕ ರವಿ ಮರಿಗೌಡರ, ಅಬಕಾರಿ ನಿರೀಕ್ಷಕ ಮಹೇಶ ಪುಠಾಣಿ, ಸಿಬ್ಬಂದಿಗಳಾದ ಬಾಳಪ್ಪ ಬಸರಗಿ, ಮಂಜುನಾಥ ಶೀಗಿಹಳ್ಳಿ, ಶಾನೂರ ಜಮಾದಾರ ಇದ್ದರು.
ಬೆಳಗಾವಿಯ ಅಪರ್‍ಆಯುಕ್ತರು ಮತ್ತು ಉಪ ಆಯುಕ್ತರು ಮಾರ್ಗದರ್ಶ ನೀಡಿದ್ದರು. ರಾಮದುರ್ಗದ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.