ಅಕ್ರಮ ಮದ್ಯ ಸಾಗಾಟ: ಓರ್ವನ ಬಂಧನ

ವಿಜಯಪುರ,ಅ.13-ಸಿಂದಗಿ ಉಪ ಚುನಾವಣೆ ಹಿನ್ನ¯ಯಲ್ಲಿ ಅಕ್ರಮವಾಗಿ ಮದ್ಯ ಸಾಗಾಟಕ್ಕೆ ಯತ್ನಿಸಿದ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ದೇವಣಗಾಂವ ಗ್ರಾಮದಲ್ಲಿ ನಡೆದಿದೆ.
ಬಸವರಾಜ್ ಜಮಾದಾರ್ ಎಂಬಾತ ಬಂಧಿತ ಆರೋಪಿ. ಇನ್ನು ಆರೋಪಿ ಅಕ್ರಮವಾಗಿ 25.520 ಲೀಟರ್ ಮದ್ಯದ ಬಾಟಲ್ ನ್ನು ರಟ್ಟಿನ ಡಬ್ಬಿ ತೆಗೆದುಕೊಂಡು ಹೋಗತ್ತಿದ್ದಾಗ ಅಬಕಾರಿ ಪೆÇಲೀಸರು ದಾಳಿ ಮಾಡಿ ಮದ್ಯದ ಬಾಟಲ್ ಹಾಗೂ ಒಂದು ಬೈಕನ್ನು ಜಪ್ತಿಗೈದಿದ್ದಾರೆ. ಈ ಕುರಿತು ಸಿಂದಗಿ ಅಬಕಾರಿ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.