ಕಲಬುರಗಿ,ಏ.17: ರವಿವಾರದಂದು ಆಳಂದ ತಾಲೂಕಿನ ಸರಸಂಬಾ ಗ್ರಾಮದ ಸಂತೋಷ ರೇವಣಸಿದ್ದಪ್ಪ ಭಕರೆ ಎಂಬುವರ ಹೊಲದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 111025 ರೂ. ಬೆಲೆಯ 754 ಲೀ. ಮಧ್ಯವನ್ನು ಮಾದನಹಿಪ್ಪರಗಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಜಿಲ್ಲಾ ಪೊಲೀಸ ಅಧೀಕ್ಷಕರು, ಅಪರ ಆದೀಕ್ಷಕರ ಕಲಬುರಗಿ ಪೊಲೀಸ ಉಪಾಧೀಕ್ಷಕರು ಆಳಂದ ಮತ್ತು ವೃತ್ತ ನೀರಿಕ್ಷಕರು ಆಳಂದ ಮಾರ್ಗದರ್ಶನದಲ್ಲಿ ಎಸ್ ಎಸ್ ಟಿ ತಂಡ ಮತ್ತು ಅಬಕಾರಿ ಇಲಾಖೇಯ ಅಧಿಕಾರಿಗಳೊಂದಿಗೆ ಮಾದನಹಿಪ್ಪರಗಿ ಪೊಲೀಸ ಠಾಣೆಯ ಪಿಎಸ್‍ಐ ಪರಶುರಾಮ ಸಿಬ್ಬಂಧಿಗಳಾದ ಮಲ್ಲಿನಾಥ, ಬೀರಣ್ಣ, ಚಂದ್ರಕಾಂತ, ಹಣಮಂತ, ಬಸವರಾಜ, ಹಣಮಂತ ಸೇರಿ ದಾಳಿ ವಶಪಡಿಸಿಕೊಂಡಿಸದ್ದಾರೆ. ಪ್ರಕರಣ ಮಾದನಹಿಪ್ಪರಗಿ ಪೊಲೀಸ ಠಾಣೆಯಲ್ಲಿ ದಾಖಲಾಗಿ ತನಿಖೆ ಒಳಪಟ್ಟಿದೆ. ಈ ಕಾರ್ಯಾಚರಣೆಗೆ ಮೇಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ