ಅಕ್ರಮ ಮದ್ಯ ವಶ: ಇಬ್ಬರ ಬಂಧನ

ಬೀದರ್: ಮಾ.19:ತಾಲ್ಲೂಕಿನ ಕುತ್ತಾಬಾದ್ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ರೂ. 84,937 ಮೌಲ್ಯದ ಮದ್ಯವನ್ನು ಅಬಕಾರಿ ಪೆÇಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣ ಸಂಬಂಧ ಶಿವಕುಮಾರ ಪ್ರಭು ಹಾಗೂ ಪ್ರಕಾಶ ಬಸವರಾಜ ಅವರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಜಾಜನಮುಳಗಿ ಗ್ರಾಮದಲ್ಲಿ ಧ್ಯಾನೇಶ್ವರ ಕೆ. ಅವರ ಮನೆ ಮೇಲೆ ದಾಳಿ ನಡೆಸಿ, ದೇಸಿ ಮದ್ಯ, ಹೊರ ರಾಜ್ಯದ ಮದ್ಯ ಹಾಗೂ ಬೀಯರ್ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಇ???ಸ್ಪೆಕ್ಟರ್ ಸತ್ಯನಾರಾಯಣ ತ್ರಿವೇದಿ, ಸಬ್ ಇ???ಸ್ಪೆಕ್ಟರ್ ಸಾದಿಕ್ ಬಾಷಾ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.