ಅಕ್ರಮ ಮದ್ಯ ವಶ ಆರೋಪಿ ಬಂಧನ

ಸಿರುಗುಪ್ಪ ನ 08 : ತಾಲೂಕಿನ ಟಿ.ಎಸ್.ಕೂಡ್ಲೂರು ಗ್ರಾಮದ ರಾಮನಗೌಡ ತಂದೆ ವೀರಭದ್ರಗೌಡ ಈತನು ಆಶೋಕ್ ಲೆಲ್ಯಾಂಡ್ ದೋಸ್ಟ್ ಆರ್‍ಎಲ್‍ಎಸ್ ಪ್ಲಸ್ ನೊಂದಣಿ ಸಂಖ್ಯೆ:ಕೆ.ಎ-34-ಬಿ-7280 ವಾಹನದಲ್ಲಿ ಒಟ್ಟು 17.280 ಲೀಟರ್ ಮದ್ಯ ಸಾಗಾಣಿಕೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಮಧ್ಯಾಹ್ನ:12.30 ಗಂಟೆ ಸಮಯದಲ್ಲಿ ಬಳ್ಳಾರಿ ಅಬಕಾರಿ ಉಪ ಅಧೀಕ್ಷಕರು, ಉಪ ವಿಭಾಗ ಬಳ್ಳಾರಿ ರವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ನಿರೀಕ್ಷಕರು, ಅಬಕಾರಿ ಉಪ ಅಧೀಕ್ಷಕರ ಅಧೀಕ್ಷಕರ ಕಛೇರಿ, ಬಳ್ಳಾರಿ ಉಪ ವಿಭಾಗ, ಹಾಗೂ ಅಬಕಾರಿ ಉಪ ನಿರೀಕ್ಷಕರು, ಸಿರುಗುಪ್ಪ ವಲಯ ಹಾಗೂ ಸಿಬ್ಬಂದಿಗಳು ಮತ್ತು ಪಂಚರೊಂದಿಗೆ ಮಧ್ಯ ಹಾಗೂ ವಾಹನ ಸೇರಿ ಅಕ್ರಮ ಆರೋಪಿಯನ್ನು ಬಾಗೇವಾಡಿ ಗ್ರಾಮಕ್ಕೆ ಹೋಗುವ ರಸ್ತೆಯ ಕ್ರಾಸಿನ ಹತ್ತಿರ ವಶಕ್ಕೆ ಪಡೆದು. ಪ್ರಕರಣವನ್ನು ಸಿರುಗುಪ್ಪ ಅಬಕಾರಿ ಇಲಾಖೆಯಲ್ಲಿ ದಾಖಲಿಸಿ, ಮುದ್ದೆಮಾಲನ್ನು ಜಪ್ತು ಪಡಿಸಿ ಹಾಗೂ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.