ಅಕ್ರಮ ಮದ್ಯ ವಶಕ್ಕೆ

ಗದಗ, ಏ.10: ಜಿಲ್ಲಾದ್ಯಂತ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದ್ದು ಏಪ್ರೀಲ್ 9 ರಂದು ಬೆಳಗ್ಗೆ ಅಬಕಾರಿ ತಂಡದ ಕಾರ್ಯಾಚರಣೆಯಲ್ಲಿ 33,724 ರೂ. ಮೌಲ್ಯದ 86.4ಲೀ ಅಕ್ರಮ ಮದ್ಯ ಹಾಗೂ ಒಂದು ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಮುಳಗುಂದದಿಂದ ಗದಗ ಮಾರ್ಗದ ಕಣವಿ ಕ್ರಾಸ್ ಹತ್ತಿರ ಕಾರನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಮುಳಗುಂದ ವಿದ್ಯಾನಗರದ ನಿವಾಸಿ ಮಹಾದೇವಪ್ಪ.ಮ.ಕಣವಿ ಎಂಬುವವರನ್ನು ವಶಕ್ಕೆ ಪಡೆದು ಅವರಿಂದ ಒಟ್ಟು 33,724 ರೂ. ಮೌಲ್ಯದ 86.4 ಲೀ ಮದ್ಯ ಹಾಗೂ ಕಾರನ್ನು ವಶಕ್ಕೆ ಪಡೆದು ಅಬಕಾರಿ ಕಾಯ್ದೆ ಉಲ್ಲಂಘನೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ. ಅಬಕಾರಿ ಡಿ.ಸಿ. ಭರತೇಶ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ ಶೈನಾಜ್ ಬೇಗಮ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.