ಅಕ್ರಮ ಮದ್ಯ ಮಾರಾಟ: 8 ಜನರ ಬಂಧನ, 70 ಸಾವಿರ ರೂ.ಮೌಲ್ಯದ ಮದ್ಯ ಜಪ್ತಿ

ಕಲಬುರಗಿ,ಸೆ.29-ಗಣೇಶ ವಿಸರ್ಜನೆ ಅಂಗವಾಗಿ ಮದ್ಯ ಮಾರಾಟ ನಿಷೇಧಿಸಿದ್ದರೂ ನಗರದ ವಿವಿಧೆಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಾಹಿತಿ ಮೇಲೆ ವಿವಿಧ ಠಾಣೆ ಪೊಲೀಸರು ಮತ್ತು ಸಿಸಿಬಿ ಪೊಲೀಸರು ದಾಳಿ ನಡೆಸಿ 8 ಜನರನ್ನು ಬಂಧಿಸಿ ಸುಮಾರು 70 ಸಾವಿರ ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ.
ಎಂ.ಎಸ್.ಕೆ.ಮಿಲ್ ಸಿಟಿ ಬಸ್ ನಿಲ್ದಾಣದ ಹತ್ತಿರ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಶೋಕ ಚವ್ಹಾಣ್ ಎಂಬಾತನನ್ನು ಅಶೋನಗರ ಪೊಲೀಸರು ಬಂಧಿಸಿ 1,600 ರೂ.ಮೌಲ್ಯದ ಮದ್ಯ ಮತ್ತು 350 ರೂ.ನಗದು ಜಪ್ತಿ ಮಾಡಿದ್ದಾರೆ. ಆಳಂದ್ ಚೆಕ್ ಪೋಸ್ಟ್ ಹತ್ತಿರ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ದಸ್ತಗೀರ ಫತ್ರುಸಾಬ ಮುಲ್ಲಾ ಎಂಬಾತನನ್ನು ಚೌಕ್ ಪೊಲೀಸರು ಬಂಧಿಸಿ 5714 ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ. ಮಲಕಯ್ಯ ಎಂಬಾತ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.
ಸಿದ್ದೇಶ್ವರ ಕಾಲೋನಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಲ್ಲಿಕಾರ್ಜುನ ನಾಗಣ್ಣ ಗೌನೂರ ಎಂಬಾತನನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿ 14,740 ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ. ಹಾಗರಗಾ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಪ್ಸರ್ ಮುಜಾವರ್ ಎಂಬಾತನನ್ನು ಬಂಧಿಸಿ 7,680 ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ. ನಂದೂರ ಇಂಡಸ್ಟ್ರೀಯಲ್ ಏರಿಯಾದಲ್ಲಿ ಶಿವಾಜಿ ಬಿಕ್ಕು ಚವ್ಹಾಣ್ ಮತ್ತು ಅಶೋಕ ಸಾಗರ ಎಂಬಾತನನ್ನು ಬಂಧಿಸಿ 18 ಸಾವಿರ ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ.
ಜವಳಿ ಕಾಂಪ್ಲೆಕ್ಸ್‍ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸಿದ್ಧಾರ್ಥ ಅಲಿಯಾಸ್ ಅರ್ಜುನ ಮದನಕರ್ ಎಂಬಾತನನ್ನು ಬ್ರಹ್ಮಪುರ ಪೊಲೀಸರು ಬಂಧಿಸಿ 5547 ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ.
ಡಬರಾಬಾದ ಹತ್ತಿರ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಶಿವಲಿಂಗಯ್ಯ ಈಳಗೇರ ಎಂಬಾತನನ್ನು ಸಬ್ ಅರ್ಬನ್ ಪೊಲೀಸರು ಬಂಧಿಸಿ 5270 ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ.